Monday, January 20, 2025
ಸುದ್ದಿ

ಮೂಡಬಿದಿರೆಯಲ್ಲಿ ಯುವಕನ ಬರ್ಬರ ಹತ್ಯೆ ; ಕಹಳೆ ನ್ಯೂಸ್

ಮೂಡುಬಿದಿರೆ : ದೊಣ್ಣೆಯಿಂದ ತಲೆಗೆ ಬಡಿದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೂಡುಬಿದಿರೆಯ ಮಿಜಾರು ದೂಮಚಡವಿನ ದಡ್ಡಿ ಕ್ರಾಸ್‍ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದ ಯುವಕನನ್ನು ಮಿಜಾರು ಮನೆಯ ಕುಂದೋಟ್ಟು, ಬರ್ಕೆ ನಿವಾಸಿ ನವೀನ್ (29) ಎಂದು ಗುರುತಿಸಲಾಗಿದೆ. ಈತ ದುಬೈನಲ್ಲಿ ಹೋಟೇಲ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಹಿಂತಿರುಗಿದ್ದ.
ಶುಕ್ರವಾರ ಸಂಜೆ ತನ್ನ ಸ್ನೇಹಿತ ಅವಿನಾಶ್‍ನೊಂದಿಗೆ ಕಟೀಲು ದೇವಾಲಯಕ್ಕೆ ತೆರಳಿ ಅಲ್ಲಿಂದ ವಾಪಾಸು ಬಂದು ದೂಮಚಡವಿನ ದಡ್ಡಿ ಕ್ರಾಸ್ ತನ್ನ ಸ್ನೇಹಿತ ಅವಿನಾಶ್ ನೊಂದಿಗೆ ಮಾತನಾಡುತ್ತಾ ನಿಂತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಅಲ್ಲಿಗೆ ಬಂದಿದ್ದ ನವೀನ್ ನ ಪರಿಚಯಸ್ಥರಾದ ರಮೇಶ(35) ಹಾಗೂ ನಿತ್ಯಾನಂದ (40) ಎಂಬವರುಗಳು ಬೈಕ್‍ನಲ್ಲಿ ಬಂದು ತಮ್ಮ ಪೋನ್ ಕರೆ ಯಾಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ರಮೇಶ, ನಿತ್ಯಾನಂದ ನವೀನ್ ತಲೆಗೆ ದೊಣ್ಣೆಯಿಂದ ಬಡಿದು ಹಲ್ಲೆ ನಡೆಸಿದ್ದಾರೆ. ತಲೆಗೆ ಬಲವಾದ ಏಟಿಗೆ ಸ್ಥಳದಲ್ಲೇ ಕುಸಿದುಬಿದ್ದ ನವೀನ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಲ್ಲೆ ನಡೆಸಿದ ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಮೆದುಳಿನ ಭಾಗ ಹೊರಬಂದಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಯಾವುದೋ ಹಣದ ವಿಚಾರದಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರ್ಗೆಗೆ ರವಾನಿಸಲಾಗಿದೆ.