Monday, January 20, 2025
ಸುದ್ದಿ

ಕೇದಾರನಾಥನ ಗುಹೆಯಲ್ಲಿ ಧ್ಯಾನಾಸಕ್ತರಾದ ಮೋದಿ – ಕಹಳೆ ನ್ಯೂಸ್

ಉತ್ತರಾಖಂಡ್‍ನ ಕೇದಾರನಾಥದಲ್ಲಿನ ಗುಹೆಯಲ್ಲಿ ಧ್ಯಾನಾಸಕ್ತರಾಗಿದ್ದ ಪ್ರಧಾನಿ ಮೋದಿ ಬೆಳಿಗ್ಗೆ ಧ್ಯಾನ ಮುಗಿಸಿ ದೇವರ ದರ್ಶನ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇದಾರನಾಥ ಗುಹೆಯಲ್ಲಿ ನಿನ್ನೆಯಿಂದ ಧ್ಯಾನಾಸಕ್ತರಾಗಿದ್ದ ಮೋದಿ ಬೆಳಿಗ್ಗೆ ದೇವಾಲಯಕ್ಕೆ ತೆರಳಿ ದರ್ಶನ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇದಾರನಾಥದ ಗುಹೆಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕೆಲವು ವರ್ಷಗಳ ಬಳಿಕ ಏಕಾಂತ ಪ್ರಾರ್ಥನೆಗೆ ಅವಕಾಶ ಸಿಕ್ಕಿದೆ. ಕೇದಾರನಾಥನ ಸನ್ನಿಧಿಗೆ ವಿಶೇಷವಾದ ಶಕ್ತಿ ಇದೆ. ದೇಶದಲ್ಲಿನ ಸದ್ಯದ ವಾತಾವರಣದಿಂದ ಸಂಪೂರ್ಣವಾಗಿ ಹೊರಗಿದ್ದೆ. ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರ ಜೊತೆಗೂ ಸಂಪರ್ಕದಲ್ಲಿ ನಾನು ಇರಲಿಲ್ಲ. ನಾನು ಏಕಾಂತದಲ್ಲಿ ಇದ್ದೆ. ಕೇದಾರನಾಥ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.