Monday, January 20, 2025
ಸಿನಿಮಾಸುದ್ದಿ

ಹೀರೋ ಆಗಲಿದ್ದಾರ ಈ ಸ್ಟಾರ್ ನಿರ್ಮಾಪಕ!? – ಕಹಳೆ ನ್ಯೂಸ್

ಕನ್ನಡ ಚಿತ್ರರಂಗ ಈಗ ಬದಲಾವಣೆಯ ಹೊಸ್ತಿಲಿನಲ್ಲಿದೆ. ಹೊಸ ಹೊಸ ಕಲಾವಿದರು ಕನ್ನಡ ಚಿತ್ರರಂಗವನ್ನು ತಮ್ಮದೇ ಆದ ವಿಭಿನ್ನ ದೃಷ್ಟಿಕೋನಗಳಿಂದ ಚಿತ್ರ ನಿರ್ಮಿಸಿ, ದೇಶದ ಉದ್ದಗಲಕ್ಕೂ ಕನ್ನಡ ಚಿತ್ರದ ಕಂಪನ್ನು ಪಸರಿಸುತ್ತಿದ್ದಾರೆ. ಉದಾಹರಣೆಗೆ ಇದ್ರಲ್ಲಿ ಇತ್ತೀಚಿಗಿನ ಕೆಜಿಎಫ್ ಚಿತ್ರದ ಯಶಸ್ಸು ಕೂಡ ಒಂದು. ರೀಮೇಕ್‍ಗಳು ಕಮ್ಮಿ ಆಗ್ತಿದೆ ಬದಲಾಗಿ ಕನ್ನಡ ಚಿತ್ರಗಳು ಪರಭಾಷೆಗೆ ರೀಮೇಕ್ ಆಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆಲ್ಲ ಕಾರಣಕರ್ತರು ಯಾರೆಂದರೆ ಹೊಸ ತಂಡವನ್ನು ಕಟ್ಟಿಕೊಂಡು ಬಜೆಟ್ ದೊಡ್ಡದಾಗಿರಲಿ ಚಿಕ್ಕದಾಗಿರಲಿ ಸಧಭಿರುಚಿಯ ಅತ್ಯುತ್ತಮ ಕಥೆಯನ್ನೊಳಗೊಂಡ ಸಿನೆಮಾಗಳನ್ನು ಮಾಡುತ್ತಿರುವ ನಿಮಾಪಕರುಗಳು. ಅಂತಹವರಲ್ಲಿ ಒಬ್ಬರು ಪುಷ್ಕರ್ ಫಿಲಂಸ್‍ನ ಮಾಲಿಕ, ಗೋ.ಬ.ಸಾ.ಮೈ. ಕಿರಿಕ್ ಪಾರ್ಟಿ ಖ್ಯಾತಿಯ ‘ಪುಷ್ಕರ್ ಮಲ್ಲಿಕಾರ್ಜುನಯ್ಯ.
ಇವರ ಕೈಯಲ್ಲಿ ನಿರ್ಮಾಣಗೊಂಡಿರುವ ಹಾಗೂ ನಿರ್ಮಾಣಗೊಳ್ಳುತ್ತಿರುವ ಸಾಕಷ್ಟು ಚಿತ್ರಗಳಿವೆ. ಹಾಗಿದ್ದರೂ ಇವರು 2 ವರ್ಷಗಳಿಂದ ಜಿಮ್‍ನಲ್ಲಿ ಪ್ರತಿದಿನ ಬೆವರಿಳಿಸುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಅದರ ಹಿಂದಿರುವ ಕಾರಣವೀಗ ಬಹಿರಂಗವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನರಸಿಂಹ ಮೂರ್ತಿ ನಿರ್ದೇಶನದಲ್ಲಿ ತಯಾರಾಗಲಿರುವ ಹೊಸ ಚಿತ್ರದಲ್ಲಿ ಪುಷ್ಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಇಲ್ಲಿ ಪುಷ್ಕರ್ ಹೀರೋ ಆಗಲಿದ್ದಾರಾ ಅಥವಾ ಬೇರೆ ಇನ್ಯಾವುದೋ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆಂದು ತಿಳಿದು ಬಂದಿಲ್ಲ. ಇನ್ನು ಈ ಚಿತ್ರಕ್ಕೆ ವಿಲಿಯಮ ಡೇವಿಡ್(ರಂಗಿತರಂಗ) ಅವರ ಛಾಯಗ್ರಹಣವಿದೆ. ಹಾಗೂ ನಿರ್ಮಾಣವನ್ನು ಸ್ವತಃ ಪುಷ್ಕರ್ ಅವರೇ ನಿಭಾಯಿಸಲಿದ್ದಾರೆ.

ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್