Monday, January 20, 2025
ಸಿನಿಮಾಸುದ್ದಿ

ರಿಲೀಸ್ ಆಯ್ತು ‘ಗಿಮಿಕ್’ ಟ್ರೈಲರ್– ಕಹಳೆ ನ್ಯೂಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹಾರರ್ ಕಾಮೆಡಿ ‘ಗಿಮಿಕ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಹಳ ಸಮಯವೇ ಆಗಿತ್ತು. ಇದೀಗ ಬಿಡುಗಡೆಗೆ ಸಜ್ಜಾಗಿರುವ ಗಿಮಿಕ್ ಸಿನೆಮದ ಟ್ರೈಲರ್ ಬಿಡುಗಡೆಗೊಂಡಿದ್ದು. ಚಿತ್ರದಲ್ಲೆಲ್ಲೂ ಹಾರರ್ ಅಥವಾ ಕಾಮೆಡಿ ಪಂಚ್ ಅಷ್ಟೇನೂ ವರ್ಕ್ ಔಟ್ ಆದಂತೆ ಕಾಣಿಸುತ್ತಿಲ್ಲ.ಹೇಳಿ ಕೇಳಿ ಇದು ಸಾಧಾರಣ ಯಶಸ್ಸು ಗಳಿಸಿದ್ದ ತಮಿಳಿನ ದಿಲ್ಲುಕು ದುಡ್ಡು ಚಿತ್ರದ ರೀಮೇಕ್ ಸಿನೆಮ ಬೇರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಿರುವಾಗ ಕನ್ನಡದ ನೇಟಿವೇಟಿಗೆ ತಕ್ಕಂತೆ ಚಿತ್ರದಲ್ಲಿ ಸ್ವಲ್ಪವೇನಾದರೂ ಬದಲಾವಣೆ ಮಾಡಬೇಕಿತ್ತು ಚಿತ್ರತಂಡ. ಇನ್ನು ಸಿನೆಮಾ ಬಿಡುಗಡೆಗೊಂಡ ಬಳಿಕ ಏನಾದರು ಬದಲಾವಣೆ ಆಗಿದೆಯಾ ಎಂದು ಕಾದು ನೋಡಬೇಕಿದೆ. ಚಿತ್ರಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಖ್ಯಾತಿಯ ನಾಗಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣೇಶ್ ಅಭಿನಯದ 99 ಚಿತ್ರ ಇತ್ತೀಚಿಗೆ ಬಿಡುಗಡೆಗೊಂಡು ಬಂದಷ್ಟೇ ವೇಗದಲ್ಲಿ ಚಿತ್ರಮಂದಿರದಿಂದ ಹೊರ ಹೋಗಿದೆ. ಇದೀಗ ಗಿಮಿಕ್ ಸರದಿ. ಆದರೆ ಇದೀಗ ಚಿತ್ರೀಕರಣಗೊಳ್ಳುತ್ತಿರುವ ‘ಗೀತಾ’ ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಭಾರವಿ ಫಿಲ್ಮ್ ಬ್ಯುರೋ, ಕಹಳೆ ನ್ಯೂಸ್