Monday, January 20, 2025
ಸಿನಿಮಾಸುದ್ದಿ

ವರಮಹಾಲಕ್ಷ್ಮೀಯಂದು ‘ಅವನೇ ಕುರುಕ್ಷೇತ್ರದಲ್ಲಿ ಪೈಲ್ವಾನ್’- ಕಹಳೆ ನ್ಯೂಸ್

ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ತುಸು ಕಮ್ಮಿಯೇ. ಆದರೆ ಈ ಬಾರಿ ವರಮಹಾಲಕ್ಷ್ಮೀ ದಿನದಂದು ಹಿಂದೆಂದೂ ಕಂಡಿರದ ಬಿಗ್ಗೆಸ್ಟ್ ಸ್ಟಾರ್ ವಾರ್ ನಡೆಯಲಿದೆ.

ಅದೂ ಇಬ್ಬರ ನಡುವೆ ಅಲ್ಲ. ಮೂರು ಸ್ಟಾರ್‌ಗಳ ನಡುವೆ ಅನ್ನೋದು ಅಚ್ಚರಿಯ ಸಂಗತಿ. ಮತ್ತು ಅವರ ಮೂರು ಚಿತ್ರಗಳೂ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ 5 ಮತ್ತು 5ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲಿಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಿಗ್ ಬಜೆಟ್ ಚಿತ್ರ ‘ಅವನೇ ಶ್ರೀಮನ್ನಾರಾಯಣ’ ಈ ಸಿನೆಮಾದ ಮೇಲೆ ಹಲವು ರೀತಿಯಿಂದ ಅತೀವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಮೊದಲೆನೆಯದಾಗಿ ‘ಕಿರಿಕ್ ಪಾರ್ಟಿ’ ನಂತರ ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರವಿದು. ಇನ್ನು ಈ ಚಿತ್ರಕ್ಕೆ ಸ್ವತಃ ರಕ್ಷಿತ್ತೇ ಕಥೆ ಚಿತ್ರಕಥೆ ಸಂಭಾಷಣೆ ಸಿದ್ಧಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡನೆಯದಾಗಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಈ ಚಿತ್ರಕ್ಕಾಗಿ ಸುದೀಪ್ ತಮ್ಮ ದೇಹವನ್ನು ಹಗಲಿರುಳು ಶ್ರಮಿಸಿ ಹುರಿಗೊಳಿಸಿದ್ದಾರೆ. ಸುದೀಪ್‍ಗೆ ವಿಲನ್ ಆಗಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಇದ್ದಾರೆ. ಪೈಲ್ವಾನ್ ಬರೋಬ್ಬರಿ 8 ಭಾಷೆಗಳಲ್ಲಿ ಸಿದ್ಧವಾಗಿ ವರಮಹಾಲಕ್ಷ್ಮೀ ದಿನಕ್ಕೆ ಬರಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ.

ಮೂರನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಚಿತ್ರ ‘ಕುರುಕ್ಷೇತ್ರ’ ಇಲ್ಲಿ ದರ್ಶನ್ ಸುಯೋಧನನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಯೋಧನನ ಕಣ್ಣಲ್ಲಿ ಮಹಾಭಾರತ ಹೇಗಿರಲಿದೆ ಎಂಬುದಕ್ಕೆ ಕುರುಕ್ಷೇತ್ರ ನೋಡಲೇಬೇಕು. ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದರೆ ನಿರ್ಮಾಣವನ್ನು ಮುನಿರತ್ನ ಮಾಡುತ್ತಿದ್ದಾರೆ. ಜೊತೆಗೆ ಕಥೆಯನ್ನು ಕೂಡಾ ಮುನಿರತ್ನ ತಾನೇ ಬರೆದಿದ್ದು ಎಂದು ಪೋಸ್ಟರ್‌ನಲ್ಲಿ ಹಾಕಿಸಿಕೊಂಡಿದ್ದಾರೆ.

ಆದರೆ ಒಂದೇ ದಿನ ಈ ಮೂರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದು ಕಷ್ಟ. ವರಮಹಾಲಕ್ಷ್ಮೀ ಹಬ್ಬದ ದಿನದ ರೇಸ್‍ನಿಂದ ಯಾರು ಹಿಂದೆ ಸರಿಯುತ್ತಾರೆ ಎಂದು ಕೆಲವೇ ದಿನದಲ್ಲಿ ತಿಳಿದು ಬರಲಿದೆ.

ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್