Monday, January 20, 2025
ಸಿನಿಮಾಸುದ್ದಿ

ದರ್ಶನ್ ದಂಪತಿಗಿಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ..!- ಕಹಳೆ ನ್ಯೂಸ್

ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್‍ಗೆ ಇವತ್ತು ಡಬಲ್ ಸಂಭ್ರಮ. ಯಾಕಂದ್ರೆ ಒಂದೆಡೆ ಕುರುಕ್ಷೇತ್ರ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ರೆ, ಇನ್ನೊಂದೆಡೆ ದರ್ಶನ್ ದಂಪತಿಗೆ 19ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ವಿವಾಹವಾಗಿ ಇಂದಿಗೆ ಬರೋಬ್ಬರಿ 18 ವರ್ಷ ಪೂರೈಸಿದ್ದು 19ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದ್ದಾರೆ. ಮೇ.19 2000ದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಇವರಿಬ್ಬರ ವಿವಾಹ ನೇರವೇರಿತ್ತು. ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡರೂ ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್ ಎನಿಸಿಕೊಂಡಿರೋ ಜೋಡಿ ಇದೀಗ ಮುದ್ದಾದ ಮಗ ವಿನೀಶ್ ಜೊತೆಯಾಗಿ ಸಂತೋಷವಾಗಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು