Saturday, November 23, 2024
ಸುದ್ದಿ

ಹೊಸವರ್ಷ ಆಚರಣೆಯ ಹೆಸರಿನ ಮೋಜು ಮಸ್ತಿಗೆ ಹಾಕಿ ಬ್ರೇಕ್ | ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರು ತಹಶೀಲ್ದಾರರಿಗೆ, ಪೊಲೀಸ್ ನಿರೀಕ್ಷಕರಿಗೆ ಮನವಿ.

 

ಪುತ್ತೂರು : ಡಿಸೆಂಬರ್ ೩೧ ರ ರಾತ್ರಿ ಹೊಸವರ್ಷದ ಪಾರ್ಟಿಗಳನ್ನು, ವರ್ಷಾಚರಣೆಯನ್ನು ನಿಷೇಧಿಸುವ ಕುರಿತು ರಾಜ್ಯಾದ್ಯಂತ ಜನಾಂದೋಲನ ನಡೆಸಲಾಗುತ್ತಿದೆ. ಆ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರು ಉಪತಹಶೀಲ್ದಾರರಾದ ಶ್ರೀಧರ ಕೆ, ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಇವರಿಗೆ ಮನವಿ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮನವಿಯಲ್ಲಿ ಸದ್ಯ ಪಾಶ್ಚಾತ್ಯ ರೂಢಿಗಳ ಪ್ರಭಾವದಿಂದ ಹೊಸವರ್ಷದ ಹೆಸರಿನಲ್ಲಿ ಡಿಸೆಂಬರ್ ೩೧ ರ ಮಧ್ಯರಾತ್ರಿ, ರಾತ್ರಿಪೂರ್ತಿ ಪಾರ್ಟಿ ಮಾಡುವ ಕೆಟ್ಟ ರೂಢಿ ಹೆಚ್ಚಾಗಿದೆ. ಈ ರಾತ್ರಿ ಯುವಕ-ಯುವತಿಯರು ಹೊಸವರ್ಷವನ್ನು ಆಚರಿಸುವ ನೆಪದಲ್ಲಿ ಮದ್ಯಪಾನ ಮಾಡುವುದು, ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ಅಂಗಪ್ರದರ್ಶನ, ಅಮಲು ಪದಾರ್ಥಗಳ ಸೇವನೆ ಮಾಡುವುದು, ಮಹಿಳೆಯರ ಜೊತೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ ನೀಡುವುದು ಮುಂತಾದ ಅಹಿತಕರ ಘಟನೆಗಳು ಜರುಗುತ್ತದೆ. ಕಳೆದ ವರ್ಷ ಡಿಸೆಂಬರ್ ೩೧ ರ ರಾತ್ರಿ ನಡೆದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಬೆಂಗಳೂರಿನ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿರುವುದು ತಮಗೆ ತಿಳಿದೇ ಇದೆ. ಅಷ್ಟೇ ಅಲ್ಲದೇ ಈ ದಿನ ರಾತ್ರಿ ಯುವಕರು ಮದ್ಯಪಾನ ಮಾಡಿ ಜೋರಾಗಿ ವಾಹನ ಓಡಿಸುವುದರಿಂದ ಅನೇಕ ಅಪಘಾತಗಳೂ ಸಂಭವಿಸುತ್ತಿವೆ. ಕೆಲವೊಂದು ಕಡೆಯಲ್ಲಿ ರಾತ್ರಿಯಿಡಿ ದೊಡ್ಡ ಸ್ವರದಲ್ಲಿ ಪಟಾಕಿ ಸಿಡಿಸಿ ಪ್ರದೂಷಣೆ ಮಾಡಲಾಗುತ್ತದೆ ಹಾಗೂ ಕರ್ಕಶ ಧ್ವನಿವರ್ಧಕ ಹಚ್ಚಿ ಅದರ ತಾಳಕ್ಕೆ ಅಶ್ಲೀಲ ಅಂಗಪ್ರದರ್ಶನ ಮಾಡಿ ನೃತ್ಯ ಮಾಡಲಾಗುತ್ತದೆ, ಅವಾಚ್ಯ ಬೈಗುಳಗಳನ್ನೂ ನೀಡಲಾಗುತ್ತದೆ. ಹಾಗೆಯೇ ಅದರಿಂದ ಯುವತಿಯರನ್ನು ಛೇಡಿಸುವ ಪ್ರಕರಣಗಳೂ ನಡೆದು ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಲಿನ ತಪ್ಪು ಪ್ರಕರಣಗಳಿಂದ ಅನೇಕ ನಾಗರಿಕರು, ಸ್ತ್ರೀಯರು, ಯುವತಿಯರಿಗೆ ಮನೆ ಹೊರಗೆ ಹೋಗುವುದು ಕಠಿಣವಾಗಿದೆ ಮತ್ತು ರಾಷ್ಟ್ರದ ಯುವಪೀಳಿಗೆ ಅವನತಿಯ ಮಾರ್ಗದಲ್ಲಿದೆ. ಆದರೂ ಇಂತಹ ತಪ್ಪು ಪ್ರಕಾರಗಳನ್ನು ತಡೆಯಲು ಡಿಸೆಂಬರ್ ೩೧ ರ ರಾತ್ರಿ ನಗರದ ರಸ್ತೆ ಮತ್ತು ಪ್ರಮುಖ ತೀರ್ಥಕ್ಷೇತ್ರಗಳಲ್ಲಿ, ಪ್ರವಾಸೀಸ್ಥಳ, ಕೋಟೆಯಂತಹ ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಧೂಮ್ರಪಾನ ಹಾಗೂ ಪಾರ್ಟಿಗಳನ್ನು ಮಾಡಲು ನಿಷೇಧಿಸಬೇಕು. ಆರಕ್ಷಕರಿಂದ ಗಸ್ತುದಳ ಪ್ರಾರಂಭಿಸುವುದು, ಅಪಪ್ರಕಾರ ಮಾಡುವ ಯುವಕರನ್ನು ಬಂಧಿಸುವುದು, ವೇಗದಿಂದ ವಾಹನ ಚಲಾಯಿಸುವವರ ಮೇಲೆ ತಕ್ಷಣ ಕ್ರಮಕೈಗೊಳ್ಳುವುದು, ಪಟಾಕಿಗಳಿಂದಾಗುವ ಪ್ರದೂಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಹೀಗೆ ಕೆಲವು ಉಪಾಯಯೋಜನೆ ಮಾಡಿ ಈ ತಪ್ಪು ಪ್ರಕರಣಗಳನ್ನು ತಡೆಯಲು ಇಲಾಖೆಗೆ ವಿನಂತಿಸುತ್ತೇವೆ.

ಭಾರತೀಯ ಸಂಸ್ಕೃತಿಗನುಸಾರ ‘ಚೈತ್ರ ಶುದ್ಧ ಪಾಡ್ಯ’ ಅಂದರೆ ಯುಗಾದಿಯಂದು ಹೊಸವರ್ಷ ಆಚರಿಸುವುದು ನೈಸರ್ಗಿಕ, ಐತಿಹಾಸಿಕ, ಆಧ್ಯಾತ್ಮಿಕ ಇವೆಲ್ಲ ದೃಷ್ಟಿಯಿಂದ ಶ್ರೇಯಸ್ಕರ ಮತ್ತು ಲಾಭದಾಯಕವಾಗಿದೆ. ಆದುದರಿಂದ ಪಾಶ್ಚಾತ್ಯ ವಿಕೃತಿಯನ್ನು ಅನುಸರಿಸುವುದರಿಂದಾಗುವ ಭಾರತೀಯ ಸಂಸ್ಕೃತಿಯ ಅಧಃಪತನ ತಡೆಯುವುದು, ನಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ. ಹಾಗಾಗಿ ೧೫ ದಿನದ ಒಳಗೆ ಇಲಾಖೆ ಇದಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಜರುಗಿಸಿ ನಮಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಯಿತು. ಮನವಿ ಆಲಿಸಿದ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ’ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ಅತ್ಯುತ್ತಮವಾಗಿದೆ, ಜನರ ಮನಃಪರಿವರ್ತನೆಯೇ ಇದಕ್ಕೆ ಪರಿಹಾರ. ಈ ಬಗ್ಗೆ ನಾವು ಸೂಕ್ತ ಕ್ರಮ ಜರುಗಿಸುತ್ತೇವೆ.’ ಭರವಸೆ ನೀಡಿದರು.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣ ಕುಮಾರ್ ಶರ್ಮ, ವಂದನಾ, ನಾರಾಯಣ ಶರ್ಮ, ರಮೇಶ, ದಯಾನಂದ ಹೆಗ್ಡೆ, ಸಾಂತಪ್ಪ ಗೌಡ, ಹರಿಪ್ರಸಾದ್ ಶೆಟ್ಟಿ, ಶರತ್ ಆಳ್ವ, ಕೇಶವ ಗೌಡ, ಮೊದಲಾದವರು ಉಪಸ್ಥಿತರಿದ್ದರು.

Leave a Response