Monday, January 20, 2025
ಸಿನಿಮಾಸುದ್ದಿ

‘ಹೀರೋ’ ಆಗಲಿರುವ ಸೆನ್ಸೆಷನಲ್ ಸ್ಟಾರ್ ನಟ – ಕಹಳೆ ನ್ಯೂಸ್

ಸೌತ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ನಂತರ ಗೀತಾ ಗೋವಿಂದಂ ಮೂಲಕ ಶತ ಕೋಟಿ ಕ್ಲಬ್‍ನಲ್ಲಿ ತನ್ನ ಹೆಸರನ್ನು ನಮೂದಿಸಿ ಇದೀಗ ‘ಡೀಯರ್ ಕಾಮ್ರೇಡ್’ ಮೂಲಕ ತೆರೆಗೆ ಬರಲು ಸನ್ನದ್ಧರಾಗಿದ್ದಾರೆ.
ಇದೆಲ್ಲಾ ಆದಮೇಲೆ ಯಾವ ಚಿತ್ರಕ್ಕೆ ವಿಜಯ್ ಸಹಿ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ಮುಂದಿನ ಚಿತ್ರದ ಹೆಸರು ‘ಹೀರೋ’

ಜಾಹೀರಾತು
ಜಾಹೀರಾತು
ಜಾಹೀರಾತು

‘ಹೀರೋ’ ಮ್ಯೂಸಿಕಲ್ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು ಕ್ರೀಡೆಯ ಕಥೆಯನ್ನು ಒಳಗೊಂಡಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ವಿಜಯ್ ಚಿತ್ರದಲ್ಲಿ ನಾಯಕಿಗೂ ಪ್ರಾಮುಖ್ಯತೆ ಇರುವುದು ನಮಗೆಲ್ಲರಿಗೂ ಗೊತ್ತೇ ಇದೆ. ‘ಹೀರೋ’ಗೆ ಹೀರೋಯಿನ್ ಆಗಿ ಮಾಳವಿಕಾ ಮೋಹನ್ ನಟಿಸಲಿದ್ದಾರೆ. ಈ ಚಿತ್ರವನ್ನು ಆನಂದ್ ಅನ್ನಾಮಲೈ ನಿರ್ದೇಶಿಸುತ್ತಿದ್ದಾರೆ. ಇದು ಇವರ ಮೊದಲ ಸಿನೆಮಾ. ಚಿತ್ರದ ನಿರ್ಮಾಣವನ್ನು ಟಾಲಿವುಡ್‍ನ ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ನಿರ್ವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್