Monday, January 20, 2025
ಸುದ್ದಿ

ಸ್ವಗೃಹಕ್ಕೆ ಅಗಮಿಸಿದ ಸಿ.ಫಿಲಿಪ್‍ರವರ ಪಾರ್ಥಿವ ಶರೀರ – ಗಣ್ಯರಿಂದ ಅಂತಿಮ ದರ್ಶನ – ಕಹಳೆ ನ್ಯೂಸ್

ಕಡಬ : ಶುಕ್ರವಾರ ಮೃತಪಟ್ಟ ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಫಿಲಿಪ್ ರವರ ಪಾರ್ಥಿವ ಶರೀರವು ಸೋಮವಾರ ಬೆಳಿಗ್ಗೆ 9.00 ಗಂಟೆಗೆ ಕಡಬಕ್ಕೆ ಆಗಮಿಸಿದ್ದು, ಕಡಬ ಅನುಗ್ರಹ ಸಭಾಭವನದ ಬಳಿಯಿಂದ ಸಾವಿರಾರು ಜನರ ಸಾನಿಧ್ಯದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಅವರ ಸ್ವನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಧ್ಯಾಹ್ನದ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಪರಾಹ್ನ ಕಡಬದ ಆರೋಗ್ಯ ಮಾತಾ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಪಾರ್ಥಿವ ಶರೀರ ಕಡಬಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಡಬ ಪೇಟೆಯ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪಾರ್ಥಿವ ಶವಯಾತ್ರೆಯಲ್ಲಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು, ವರ್ತಕ ಬಂಧುಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ತಾಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಅಂತಿಮದರ್ಶನ ಪಡೆದರು. ಸುಳ್ಯ ಶಾಸಕ ಎಸ್.ಅಂಗಾರ ಅವರು ಸಿ.ಫಿಲಿಪ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು