Thursday, April 3, 2025
ಕ್ರೀಡೆಸುದ್ದಿ

ನಿವೃತ್ತಿಯಾಗಲು ಯುವರಾಜ್‍ಸಿಂಗ್ ಯೋಚನೆ!? – ಕಹಳೆ ನ್ಯೂಸ್

ಭಾರತದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿದೆ.

ಆದರೆ ಈ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಯುವರಾಜ್‍ಸಿಂಗ್ ಲಭ್ಯರಾಗಿಲ್ಲ. ಪ್ರಾಂಚೈಸಿಗಳು ಹೊಂದಿರುವ ಲೀಗ್‍ಗಳಲ್ಲಿ ಮುಂದುವರೆಯುವುದು ಅವರ ಯೋಜನೆ ಎನ್ನಲಾಗಿದೆ. ಯುವರಾಜ್ ಕೆಲವರಲ್ಲಿ ತಮ್ಮ ನಿವೃತ್ತಿ ಕುರಿತು ಅನೌಪಚಾರಿಕವಾಗಿ ಹೇಳಿಕೊಂಡಿದ್ದಾರೆ ಇದನ್ನು ಅವರು ಅಧಿಕೃತವಾಗಿ ಪ್ರಕಟಿಸಲೂಬಹುದು ಎಂದು ಬಿಸಿಸಿಐ ಅಧಿಕಾರಿಯೋಬ್ಬರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ ಆಗಿ ಮೆರೆದಿದ್ದ ಯುವರಾಜ್ ಸಿಂಗ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರವಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿಗಷ್ಟೇ ಮುಗಿದ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕೇವಲ ಒಂದೆರಡು ಪಂದ್ಯಗಳನ್ನು ಆಡಿದ್ದರು. ಯುವರಾಜ್ ಸಿಂಗ್‍ನ್ನು ಕಡೆಗಣಿಸಿದರ ಬಗ್ಗೆ ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿತ್ತು. ಈಗಾಗಲೇ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಯುವ ಆಟಗಾರರಿರುವುದರಿಂದ ಯುವರಾಜ್ ಸಿಂಗ್‍ರಂತ ಹಿರಿಯ ಆಟಗಾರರಿಗೆ ಅವಕಾಶ ಸಿಗುವುದು ಕಡಿಮೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ