ಕಲ್ಲಡ್ಕ: ಶ್ರೀ ರಾಮ ವಿದ್ಯಾ ಕೇಂದ್ರ ಹನುಮಾನ್ ನಗರ ಕಲ್ಲಡದ ಹೊನಲು ಬೆಳಕಿನ ಆಕರ್ಷಕ ಕ್ರೀಡೋತ್ಸವು ದಶಂಬರ 16 ಶನಿವಾರದಂದು ಸಂಜೆ 5.45ಕ್ಕೆ ವಿದ್ಯಾ ಕೇಂದ್ರದ ವಿಶಾಲ ಮೈದಾನದಲ್ಲಿ ಡಾ.ಪ್ರಭಾಕರ ಭಟ್ ಕಲಡ್ಕ ,ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಶಿಶು ಮಂದಿರ, ಪ್ರಾಥಮಿಕ ಶಾಲೆ,ಪ್ರೌಢಶಾಲೆ,ಪದವಿ ಪೂರ್ವ, ಹಾಗೂ ಪದವಿ ತರಗತಿಗಳ 3300 ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರದರ್ಶನ ಮಾಡುವ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವ ಸಂಜೆ 5.45 ರಿಂದ ಹೊನಲು ಬೆಳಕಿನಲ್ಲಿ ನಡೆಯಲಿದ್ದು,ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೊಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ,ನೃತ್ಯ, ಭಜನೆ,ಮಲ್ಲಕಂಬ,ಘೋಷ್ಟಿಕ್ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ ,ದ್ವಿಚಕ್ರ-ಏಕಚಕ್ರ ಸಮತೋಲನ,ಬೆಂಕಿ ಸಾಹಸ,ಕೇರಳದ ಚೆಂಡೆ ವಾದ್ಯ ,ಕಾಲ್ಚಕ್ರ,ಕೂಪಿಕಾ ಸಮತೋಲನ,ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಕಾರ್ಯಕ್ರಮವನ್ನು ವೀಕ್ಷಿಸುವುದಕ್ಕಾಗಿ ವಿಶೇಷ ಗ್ಯಾಲರಿ ಹಾಗೂ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಡಾ.ಆರ್ ಸಿ.ಸಿನ್ಹ, ರಾಷ್ಟ್ರೀಯ ಸಲಹೆಗಾರರು,ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನವದೆಹಲಿ ,ಮಿಥಿಲೇಶ್ ಕುಮಾರ್ ತ್ರಿಪಾಠಿಗ್ರೂಪ್ಸ್,ನವದೆಹಲಿ ,ಬಾಮನ ಕೆ.ಮೆಹ್ತಾ ಮುಂಬಯಿ,ಕೆ.ಪಿ ನಂಜುಡಿ,ಅಧ್ಯಕ್ಷರು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ,ಬೆಂಗಳೂರು, ನಿತ್ಯಾನಂದ ಭಂಡಾರಿ ,ಉದ್ಯಮಿಗಳು ದುಬೈ,ಡಿ.ಎಸ್ .ಚಂದವರ್ಕಾರ್ ,ಮುಂಬಯಿ ,ವಿನೋದ್ ಎಸ್.ವ್ಯಾಸ ಮುಂಬಯಿ, ಆನಂದ ಶೆಟ್ಟಿ, ಉದ್ಯಮಿಗಳು ಮುಂಬಯಿ,ಸುರೇಶ್ ಭಂಡಾರಿ ಕಡಂದಲೆ ಅಧ್ಯಕ್ಷರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಅಶೋಕ್ ಶೆಟ್ಟಿ ಮ್ಯಾನೇಜಿಂಗ್ ಡೈರೆಕ್ಟರ್ ಥೋಮ್ಸನ್ ಮುಂಬಯಿ,ಸಿ ಸತ್ಯನಾರಾಯಣ ರೆಡ್ಡಿ ಹೈದರಬಾದ್ ,ರಾಘವೇಂದ್ರ ಕಾಮತ್ ನ್ಯಾಚುರಲ್ ಐಸ್ಕೀಮ್, ಉಮೇಶ್ ಶೆಟ್ಟಿ ಪೋಳ್ಯ ,ಅಧ್ಯಕ್ಷರು ವಿಶ್ವಹಿಂದ್ ಪರಿಷತ್ಥಾಣೆ,ಸುಭಾಶ್ ಬಿ.ಅಡಿ,ಉಪ ಲೋಕಯಕ್ತರು ಬೆಂಗಳೂರು, ರವಿಂದ್ರ ಪೈ ಬೆಂಗಳೂರು, ಶಾಸಕರಾದ ಸಂಜಯ ಬಿ ಪಾಟೀಲ್ ಬೆಳಗಾಮ್ ಗ್ರಾಮಾಂತರ ,ಶಶಿಕಲಾ ಎ ಜೊಲ್ಲೆ ಬೆಳಗಾಮ್,ಅರವಿಂದ ಬೆಲ್ಲದದಾರವಾಡ,ಸೋಮಶೇಖರರೆಡ್ಡಿ ಬಳ್ಳಾರಿ ನಗರ,ರಾಜು ಕಾಗೆ ಬೆಳಗಾಮ್ ,ಮುನಿರಾಜು ಬೆಂಗಳೂರು,ಎಂ.ರಾಜೇಂದ್ರ ಮೈಸೂರು,ಅಧ್ಯಕ್ಷರು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಸಿಯೇಷನ್, ವೇಲಾಯುದನ್ ಕುಟ್ಟಿ ರಾಷ್ಟ್ರೀಯ ಅಧ್ಯಕ್ಷರು ವಿದ್ಯಾಭಾರತಿ ಖೇಲ್ ಪರಿಷತ್ ,ಎ.ಸಿ.ಗೋಪಿನಾಥನ್ ಸಂಘಟನಾ ಕಾರ್ಯದರ್ಶಿ ವಿದ್ಯಾಭಾರತಿ ದಕ್ಷಿಣಕ್ಷೇತ್ರ ಇವರುಗಳು ಭಾಗವಹಿಸುವರು.