Monday, January 20, 2025
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್‍ನಲ್ಲಿ ‘ಗಜ’ ಪುರಾಣ! – ಕಹಳೆ ನ್ಯೂಸ್

ಸಿನಿಮಾ ಜಗತ್ತಿನಲ್ಲಿ ಒಳಹೊಕ್ಕಷ್ಟು ಅನೇಕಾನೇಕ ಸ್ವಾರಸ್ಯಕರ ಸಂಗತಿಗಳು ನಮ್ಮನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಸಿನೆಮಾಗಳಿಗೆ ಪ್ರಾಣಿಗಳ ಅದರಲ್ಲೂ ವನ್ಯ ಮೃಘಗಳ ಹೆಸರನ್ನಿಡುವುದೂ ಒಂದು ಸ್ವಾರಸ್ಯಕರ ಸಂಗತಿ.
ಇದು ಕನ್ನಡಕ್ಕೆ ಮಾತ್ರವಲ್ಲ ಇತರೆ ಚಿತ್ರರಂಗಗಳಲ್ಲೂ ಇವೆ. ಆದರೆ ನಾವು ಸ್ಯಾಂಡಲ್‍ವುಡ್‍ನತ್ತ ಗಮನ ಹರಿಸೋಣ. ಇತ್ತೀಚಿಗೆ ಪ್ರಾಣಿಗಳ ಮತ್ತು ವನ್ಯ ಮೃಘಗಳ ಹೆಸರಿನಲ್ಲಿ ಬಂದ ಚಿತ್ರಗಳೆಂದರೆ ಶಿವಣ್ಣನ ‘ಟಗರು’ ಅದಕ್ಕೂ ಮೊದಲು ಸುದೀಪ್‍ರವರ ‘ಹೆಬ್ಬುಲಿ’ ಮೊದಲಾದವುಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆಯೇ ಆನೆಯ ಹೆಸರಿನಲ್ಲಿ ಸಾಕಷ್ಟು ಸಿನೆಮಾ ಶೀರ್ಷಿಗಳು ಸ್ಯಾಂಡಲ್‍ವುಡ್‍ನಲ್ಲಿ ಬಂದು ಹೋಗಿವೆ ಬರುತ್ತಲಿವೆ ಕೂಡ. ಅದ್ರಲ್ಲಿ ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಗಜ’ ಇದೊಂದು ಮಾಸ್ ಕಮರ್ಷಿಯಲ್ ಚಿತ್ರವಾಗಿತ್ತು. ಅದಾದ ಮೇಲೆ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಗಜಕೇಸೆರಿ’ ಇದ್ರಲ್ಲಿ ಸ್ವತ: ಚಿತ್ರದ ನಾಯಕ ನಟ ಯಶ್ ಆನೆಗಳನ್ನು ಪಳಗಿಸೋ ಬಾಹುಬಲಿ ಎಂಬ ಪಾತ್ರದಲ್ಲಿ ಅಬ್ಬರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಇದೀಗ ದುನಿಯಾ ವಿಜಯ್ ‘ಸಲಗ’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ತಾವೇ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಹಾಗೂ ‘ಅಯೋಗ್ಯ’ನ ಮೂಲಕ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕರೆನಿಸಿಕೊಂಡ ಮಹೇಶ್ ಕುಮಾರ್ ನಿರ್ದೇಶನದ ದ್ವಿತೀಯ ಚಿತ್ರ ‘ಮದಗಜ’. ಈ ಚಿತ್ರವನ್ನು ಮೊದಲಿಗೆ ಧ್ರುವ ಸರ್ಜಾ ಮಾಡಬೇಕಿತ್ತು. ಆದರೆ ಅವರ ಕಾಲ್‍ಶೀಟ್ ದೊರಕದ ಕಾರಣ ರೋರಿಂಗ್ ಸ್ಟಾರ್ ಶ್ರೀಮುರಳಿ ‘ಮದಗಜ’ನಾಗಿ ಆರ್ಭಟಿಸಲು ಅಣಿಯಾಗಿದ್ದಾರೆ. ಮದಗಜನ ಕಥೆಯ ಎಳೆಯೊದನ್ನು ಬಿಟ್ಟುಕೊಟ್ಟಿರುವ ಮಹೇಶ್ ಕುಮಾರ್, ಭಾರತದ ನೂರು ಮಂದಿ ಶ್ರೀಮಂತರಲ್ಲಿ ಒಬ್ಬರಾಗಿ ಶ್ರೀಮುರಳಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.

ಇವರೆಲ್ಲರ ಜೊತೆಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ‘ಆನೆ ಪಟಾಕಿ’ ಎಂಬ ಚಿತ್ರದಲ್ಲಿ ಈ ಹಿಂದೆ ಹೀರೋ ಆಗಿ ನಟಿಸಿದ್ದರು.