Monday, January 20, 2025
ರಾಜಕೀಯಸುದ್ದಿ

ಪ್ರಸಾರ ಸ್ಥಗಿತಗೊಳಿಸಿದ ನಮೋ ಟಿವಿ – ಕಹಳೆ ನ್ಯೂಸ್

ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿದಿದ್ದು ನಮೋ ಟಿವಿ ತನ್ನ ಪ್ರಸಾರ ನಿಲ್ಲಿಸಿದೆ. ಎಲ್ಲಾ ಕೇಬಲ್ ಆಪರೇಟರ್ಸ್ ಸೇವೆಗಳಲ್ಲೂ ಕೂಡ ನಮೋ ಟಿವಿ ತನ್ನ ಕಾರ್ಯಾಚರಣೆ ನಿಲ್ಲಿಸಿದೆ. ಬಿಜೆಪಿ ಮಾಲೀಕತ್ವದ ನಮೋ ಟಿವಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಗೆ ಕಾರಣವಾಗಿತ್ತು. ಪ್ರಧಾನಿ ಮೋದಿ ಅವರ ಚುನಾವಣಾ ಭಾಷಣಗಳನ್ನು ಲೈವ್ ಪ್ರಸಾರ, ಬಿಜೆಪಿ ಪಕ್ಷದ ಸಾಧನೆ, ಪ್ರಧಾನಿಯ ಸಂದರ್ಶನಗಳು ಹಾಗೂ ಮೋದಿ ಮಾಹಿತಿಯ ಕುರಿತು ಮಾತ್ರ ಸೀಮಿತವಾಗಿದ್ದ ನಮೋ ಟಿವಿ ವಿರುದ್ಧ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

ಬಿಜೆಪಿ ಪರ ಪ್ರಚಾರ ಮಾಡ್ತಿದ್ದ ನಮೋ ಟಿವಿಗೆ ಚುನಾವಣಾ ಆಯೋಗ ಎಲೆಕ್ಷನ್ ಮುಗಿಯುವವರೆಗೆ ನಿರ್ಬಂಧ ಮಾಡಲಾಗಿತ್ತು ಆದರೆ ಈಗ ಮೇ 17 ರಿಂದ ಈ ನಮೋ ಟಿವಿ ತನ್ನ ಪ್ರಸಾರವನ್ನೂ ನಿಲ್ಲಿಸಿದೆ. ಇದನ್ನು ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಳವಿಯಾ ಸ್ಪಷ್ಟಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು