Monday, January 20, 2025
ರಾಜಕೀಯಸುದ್ದಿ

ಭಾರತದಲ್ಲಿ ಈಗ ಸೋಲು ಗೆಲುವಿನ ಲೆಕ್ಕಾಚಾರ – ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ಪ್ರಜಾತಂತ್ರದ ಸಂಭ್ರಮ ಮುಗಿದಾಗಿದೆ..ಇನ್ನೇನಿದ್ರೂ ಸೋಲು ಗೆಲುವಿನ ಪ್ರಶ್ನೆ ಮಾತ್ರ ಉಳಿದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ ಬಾರಿ ಒಟ್ಟು 542 ಕ್ಷೇತ್ರಗಳ ಎಲ್ಲಾ ಏಳೂ ಹಂತದ ಚುನಾವಣೆಗಳೂ ಸೇರಿ ಶೇಕಡಾ 67.11ರಷ್ಟು ಮತದಾನವಾಗಿದ್ದು, ಅತೀ ಹೆಚ್ಚು ಪ್ರಮಾಣದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 65.95ರಷ್ಟು ಮತದಾನವಾಗಿತ್ತು.

ಕಳೆದ ಬಾರಿಗಿಂತ ಈ ಬಾರಿ ಶೇಕಡಾ 1.16ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಮತದಾನದ ಪ್ರಮಾಣದಲ್ಲಿ ಅತೀ ಹೆಚ್ಚು ಏರಿಕೆಯಾಗಿದೆ. ಕಳೆದ ಬಾರಿಗಿಂತ ಶೇಕಡಾ 9.6ರಷ್ಟು ಮಧ್ಯಪ್ರದೇಶದಲ್ಲಿ ಹೆಚ್ಚಳವಾಗಿದ್ದು, ಒಟ್ಟು 71.2ರಷ್ಟು ಮತದಾನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೇ ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಮತದಾನದ ಪ್ರಮಾಣ ಭಾರೀ ಕುಸಿತ ಕಂಡಿದೆ. 2014ರ ಲೋಕಕದನದಲ್ಲಿ 49.7ರಷ್ಟು ಮತದಾನವಾಗಿತ್ತು. ಆದ್ರೆ ಈ ಬಾರಿ ಕೇವಲ 29.4 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮತದಾನದ ವೇಳೆ ಅತೀ ಹೆಚ್ಚು ಪ್ರಮಾಣದಲ್ಲಿ ಹಿಂಸಾಚಾರ ನಡೆದಿದ್ದ ಪಶ್ಚಿಮ ಬಂಗಾಳದಲ್ಲೂ ಕೂಡ ಮತದಾನ ಪ್ರಮಾಣ ಕಡಿಮೆಯಾಗಿದೆ. 2014ರಲ್ಲಿ ಶೇಕಡಾ 82.2% ಮತದಾನವಾಗಿದ್ರೆ, ಈ ಬಾರಿ ಶೇಕಡಾ 81.9%ರಷ್ಟು ಮತದಾನವಾಗಿದೆ. ಇದು ತಾತ್ಕಾಲಿಕ ಮಾಹಿತಿಯಾಗಿದ್ದು, ಮುಂದೆ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಅಂತಾ ಚುನಾವಣಾ ಆಯೋಗ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು