Tuesday, January 21, 2025
ರಾಜಕೀಯಸುದ್ದಿ

ಮೋದಿ ಎಷ್ಟು ನಾಟಕ ಮಾಡ್ತಾನೆ: ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಮತ್ತೆ ಏಕವಚನದಲ್ಲಿ ವಾಗ್ದಾಳಿ – ಕಹಳೆ ನ್ಯೂಸ್

ಕಲಬುರ್ಗಿ: ಮೋದಿ ಎಷ್ಟು ನಾಟಕ ಮಾಡ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ. ಬಡಿಗೆ ಹಿಡಿದುಕೊಂಡು ಹೋಗೋದು, ಶಾಲು ಬದಲಾಯಿಸಿ ಕುಳಿತುಕೊಳ್ಳುವುದು, ಹೃದಯದಿಂದ ಬರತಕ್ಕಂತ ಆಧ್ಯಾತ್ಮ ಅಲ್ಲ. ಮೋದಿ ಜನರ‌ ಮೇಲೆ ಪ್ರಭಾವ ಬೀರಲು ಯತ್ನ ಮಾಡಿದ್ರು. ಡೈರೆಕ್ಟಲ್ಲಿ ಅಥವ ಇನ್‌ಡೈರೆಕ್ಟಲ್ಲಿ ಪ್ರಚಾರ ಮಾಡಲು ಯತ್ನಿಸಿದ್ರು ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಇದೇ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗದವರ ಜೊತೆ ಒಂದು ರೀತಿ ಬೇರೆಯವರ ಜೊತೆ ಒಂದು ರೀತಿ ನಡೆದುಕೊಳ್ಳುತ್ತಿದೆ. ಮೋದಿ, ಶಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದರ ವಿರುದ್ಧ ಪಾರದರ್ಶಕ ಕ್ರಮ ಕೈಗೊಳ್ಳುತ್ತಿಲ್ಲ. ಎಲೆಕ್ಷನ್ ಕಮಿಷನ್ ನಿಂದ ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೆರಡು ದಿವಸಗಳಲ್ಲಿ ಫಲಿತಾಂಶ ಬರುತ್ತೆ ಗೊತ್ತಾಗುತ್ತೆ ಅಲ್ಲ. ನಮ್ಮೆಲ್ಲರ ಜೀವ ಇವಿಎಂ ಬಾಕ್ಸ್‌ಗಳಲ್ಲಿದೆ, ಆ ಬಾಕ್ಸ್‌ಗಳಲ್ಲಿ ಅವರೇನು ಮಾಡಿದಾರೆ ಗೊತ್ತಿಲ್ಲ. ಒಬ್ಬ ಮನುಷ್ಯನಿಗೆ ಸೋಲಾಗಬೇಕೆಂದ್ರೆ ಕಾರಣ ಬೇಕಲ್ಲ. ಕಾರಣ ಇಲ್ಲದೇ ಸೋಲ್ತಾನೆ ಅಂದ್ರೆ ಅದರಲ್ಲಿ ಏನೋ ವ್ಯತ್ಯಾಸ ಇದೆ ಎಂದು. ನಾವು ಮಾಡಿದ ಕೆಲಸದ ಮೇಲೆ ನಮಗೆ ನಂಬಿಕೆ ಇದೆ ಗೆಲ್ಲುವ ವಿಶ್ವಾಸವಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು