Saturday, November 16, 2024
ಸುದ್ದಿ

ಅಮಿತ್ ಶಾ ಹಾಗೂ ಜಗದೀಶ್ ಶೆಟ್ಟರ್ ಸುದೀರ್ಘವಾಗಿ ದೂರವಾಣಿಯಲ್ಲಿ ಮಾತುಕತೆ: ಶೆಟ್ಟರ್‌ಗೆ ಹೊಸ ಅಸೈನ್‌ಮೆಂಟ್ ನೀಡಿದ ಅಮಿತ್ ಶಾ – ಕಹಳೆ ನ್ಯೂಸ್

ಬೆಂಗಳೂರು: ಮೇ‌ 23 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿರೋ ಹಿನ್ನೆಲೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ದೊರಕಿದೆ. ನಿನ್ನೆ ಸಂಜೆ ಅಮಿತ್ ಶಾ ಹಾಗೂ ಜಗದೀಶ್ ಶೆಟ್ಟರ್ ಸುಮಾರು 15 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ್ದು, ಶೆಟ್ಟರ್​ಗೆ ಅಮಿತ್​ ಶಾ ಹೊಸ ಅಸೈನ್​​ಮೆಂಟ್​ ನೀಡಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ  ಹಾಗೂ ಜಗದೀಶ್ ಶೆಟ್ಟರ್ ನಡೆಸಿದ ಮಾತುಕತೆ- 

ಜಾಹೀರಾತು
ಜಾಹೀರಾತು
ಜಾಹೀರಾತು

2013ರ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಿದಾಗ ನೀವು ಮುಖ್ಯಮಂತ್ರಿಯಾಗಿದ್ರಿ. ಅಂದಿನ ರಾಜ್ಯ ಬಿಜೆಪಿ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಇರುವ ವ್ಯತ್ಯಾಸಗಳೇನು? ಈಗ ರಾಜ್ಯದಲ್ಲಿ ನಾವು ಅಧಿಕಾರ ಹಿಡಿಯುವ ಸಮಯ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪರನ್ನು ಹೊರತುಪಡಿಸಿ, ಯಾರಿಗೆಲ್ಲ ಸ್ಥಾನಮಾನಗಳನ್ನು ನೀಡಬಹುದು? ನೀವು ಮುಖ್ಯಮಂತ್ರಿಯಾಗಿದ್ದಾಗ, ನಿಮ್ಮ ಸಂಪುಟದಲ್ಲಿದ್ದ ಸಚಿವರ ಪಟ್ಟಿ ಕಳುಹಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ರೆ, ಯಾರೆಲ್ಲಾ ಸಚಿವರಾಗಬಹುದು? ಮುಂದಿನ ನಾಲ್ಕು ವರ್ಷಕ್ಕೆ ರಾಜ್ಯದಲ್ಲಿ ಮತ್ತೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈಗ ನಾವು ಹೂಡುವ ತಂತ್ರ ಮುಂದಿನ ಚುನಾವಣೆಯಲ್ಲೂ ನಮಗೆ ವರವಾಗಬೇಕು. ಮುಂದೆ ಕನಿಷ್ಠ ಮೂರು ಅವಧಿಯಲ್ಲಾದ್ರೂ ಬಿಜೆಪಿ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿರಬೇಕು. ಹೀಗಾಗಿ ನೀವೊಂದು ಪಟ್ಟಿ ಮಾಡಿ. ಆ ಪಟ್ಟಿಯಲ್ಲಿ ನಿಮ್ಮ ಸಂಪುಟದಲ್ಲಿದ್ದ ಸಚಿವರ ಹೆಸರು ಹಾಗೂ ಈಗ ಸರ್ಕಾರ ರಚನೆ ಮಾಡಿದ್ರೆ ನೇಮಕ ಮಾಡಬಹುದಾದ ಸಚಿವರ ಹೆಸರನ್ನು ಕಳುಹಿಸಿ.

ಪಟ್ಟಿಯಲ್ಲಿರುವ ಹೆಸರುಗಳು ಗೌಪ್ಯವಾಗಿರಬೇಕು, ಎಲ್ಲಿಯೂ ಸೋರಿಕೆಯಾಗಬಾರದು. ಮೇ 22ರ ಸಂಜೆಯೊಳಗೆ ನನ್ನ ಕೈಯಲ್ಲಿ ಪಟ್ಟಿ ಇರಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಅಮಿತ್ ಶಾ ಮಾತಿಗೆ ಸ್ಪಂದಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.