Recent Posts

Monday, January 20, 2025
ಸುದ್ದಿ

ಧರ್ಮಸ್ಥಳದಲ್ಲಿ ನೀರಿನ ಕೊರತೆ : ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದ ಬೆಂಗಳೂರಿನ ಭಕ್ತರು – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನೀರಿನ ಕೊರತೆಯನ್ನು ಗಮನಿಸಿದ ಬೆಂಗಳೂರಿನ ಬಸವನಗುಡಿ ಸುಂಕೇನಹಳ್ಳಿಯ ಭಕ್ತಬಂಧುಗಳು ಸೋಮವಾರ ರಾತ್ರಿ 6,780 ಲೀಟರ್ ಕುಡಿಯುವ ನೀರನ್ನು ಕೊಡುಗೆಯಾಗಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

339 ಕ್ಯಾನ್‍ಗಳಲ್ಲಿ ತಲಾ 20 ಲೀಟರ್‍ ನಂತೆ ಒಟ್ಟು 6,780 ಲೀ ನೀರನ್ನು ಅವರು ತಮ್ಮ ವಾಹನಗಳಲ್ಲಿ ಸೋಮವಾರ ರಾತ್ರಿ ತಂದು ಕೊಟ್ಟರು. ಅನ್ನಪೂರ್ಣ ಛತ್ರದಲ್ಲಿ ಅಕ್ಕಿ ಬೇಯಿಸಲು ಹಾಗೂ ಭಕ್ತಾದಿಗಳಿಗೆ ಕುಡಿಯಲು ಈ ನೀರನ್ನು ಬಳಸಲಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಈ ಸಂದರ್ಭ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು