Recent Posts

Monday, January 20, 2025
ಸುದ್ದಿ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ 77ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನಲ್ಲಿ ಹಿಂದೂ ಏಕತಾ ಮೆರವಣಿಗೆ – ಕಹಳೆ ನ್ಯೂಸ್

ಮಂಗಳೂರು – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ 77 ನೇ ಜನ್ಮೋತ್ಸವ ನಿಮಿತ್ತ ಹಿಂದೂ ಐಕ್ಯತೆ ಮೆರವಣಿಗೆಯು ಇಂದು ಜ್ಯೋತಿ ವೃತ್ತದಿಂದ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾಗಿ ಮೆರವಣಿಗೆಯ ಮೂಲಕ ಪುರಭವನದಲ್ಲಿ ಸಮಾರೂಪ ಕಾರ್ಯಕ್ರಮದಿಂದ ಮುಕ್ತಾಯವಾಯಿತು. ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೆರವಣಿಗೆಯಲ್ಲಿ ಇಸ್ಕಾನ್ ಸಂಸ್ಥೆ, ಶ್ರೀರಾಮ ಸೇನೆ, ನವಜೀವನ ವ್ಯಾಯಾಮ ಶಾಲೆ ಮಾರ್ನಬೈಲ್ , ಖಾವಂತಾಯ ಗೆಳೆಯರು ಮಾರ್ನಬೈಲು, ಚಿರಂಜೀವಿ ಯುವಕ ಮಂಡಳಿಯ ಕಾರ್ಯಕರ್ತರು ಮತ್ತು ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಉಪಸ್ಥಿತಿತರಿದ್ದರು ಹಾಗೆಯೇ ಅಯ್ಯಪ್ಪ ಭಜನಾ ಮಂಡಳಿ ದೇರಳಕಟ್ಟೆ, ಭಜನಾ ಮಂಡಳಿ ಕೊಳಕ್ಕೆ ಇವರು ಉಪಸ್ಥಿತಿತರಿದ್ದರು. ರಣರಾಗಿಣೆ ಶಾಖೆಯ ಯುವತಿಯರು ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೀರ ವನಿತೆಯರ ವೇಶದಲ್ಲಿ ಮಿಂಚಿದರು. ಅದೇ ರೀತಿಯಲ್ಲಿ ಯುವಕರು ಮೆರವಣಿಗೆಯಲ್ಲಿ ಸ್ವಸಂರಕ್ಷಣೆಯ ಪ್ರಾತ್ಯಕ್ಷತೆಯನ್ನು ತೋರಿಸಿ ಸ್ವಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಪ್ರಥಮ ಚಿಕಿತ್ಸೆಯ ಕಕ್ಷೆ ಮತ್ತು ಮೆರವಣಿಗೆಯಲ್ಲಿ ಹಿಂದೂ ರಾಷ್ಟ್ರ, ಹಿಂದೂ ಐಕ್ಯತೆಯ ಘೋಷಣೆಗಳು ಎಲ್ಲರಲ್ಲಿ ಉತ್ಸಾಹ ನಿರ್ಮಾಣವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದು ಹಿಂದೂಗಳ ಸಂವಿಧಾನಿಕ ಅಧಿಕಾರವಾಗಿದೆ!
-ಶ್ರೀ.ಚಂದ್ರಮೊಗೇರ್ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರು

ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯರು ಮಾತನಾಡಿ “
ಹಿಂದೂ ರಾಷ್ಟ್ರವೆಂದರೆ ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ವಗುಣಿ ಜನರ ರಾಷ್ಟ್ರ.‌ ಪರಾತ್ಪರ ಗುರು ಡಾ. ಆಠವಲೆಯವರು ‘ಹಿಂದೂ ರಾಷ್ಟ್ರದ’ ವಿಷಯದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನ ಮಾಡಿದ್ದಾರೆ. ‘ಹಿಂದೂ ರಾಷ್ಟ್ರ ಸ್ಥಾಪನಾ ದಿಶೆ’ ಈ ಗ್ರಂಥದಲ್ಲಿ , ‘ಮೇರುತಂತ್ರ’ ಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ’ ಎಂದರೆ ಹೀನ ಅಥವಾ ಕನಿಷ್ಠ ರಜ-ತಮ ಗುಣಗಳನ್ನು ‘ದೂಷಯತಿ’ ಅಂದರೆ ನಾಶಪಡಿಸುವವನೇ ಹಿಂದೂ ಎಂದು ಹಿಂದು ಶಬ್ದದ ಉತ್ಪತ್ತಿಯನ್ನು ಕೊಡಲಾಗಿದೆ.ನಮ್ಮ ಪೂರ್ವಜ ಋಷಿಮುನಿಗಳ ಘೋಷಣೆಯು ‘ಕೃಣ್ವಂತೋ ವಿಶ್ವಮ್ ಆರ್ಯಂ’ ಅಂದರೆ ‘ಇಡೀ ವಿಶ್ವವನ್ನು ಆರ್ಯ(ಸುಸಂಸ್ಕೃತ) ವನ್ನಾಗಿಸೋಣ ಎಂದು ಹೇಳಲಾಗಿದೆ. ‘ಹಿಂದೂ ರಾಷ್ಟ್ರ’ ಎಂಬ ಶಬ್ದ ಉಚ್ಚರಿಸಿದೊಡನೆ, ಪುರೋಗಾಮಿಗಳು, ಜಾತ್ಯಾತೀತವಾದಿಗಳು, ಇತರ ಪಂಥೀಯರು ಮತ್ತು ಪ್ರಸಾರ ಮಾಧ್ಯಮಗಳು ‘ಹಿಂದೂ ರಾಷ್ಟ್ರದ ಬೇಡಿಕೆಯು ಸಾಂವಿಧಾನಕ್ಕನುಗುಣವಾಗಿಲ್ಲ. ಹಿಂದೂ ರಾಷ್ಟ್ರದ ಬೇಡಿಕೆಯು ಸಾಂವಿಧಾನಿಕವಾಗಿದೆ. ದೇಶದಮೂಲ ಸಂವಿಧಾನದಲ್ಲಿ ‘ಸೆಕ್ಯುಲರ್’ ಎಂಬ ಉಲ್ಲೇಖವಿರಲಿಲ್ಲ. ಇಂದಿರಾ ಗಾಂಧಿಯವರು 1976ರಲ್ಲಿ 47ನೇ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದಲ್ಲಿ ‘ಧರ್ಮ ನಿರಪೇಕ್ಷ’ ಮತ್ತು ‘ಸಮಾಜವಾದ’ ಎಂಬ ಶಬ್ದಗಳನ್ನು ಸೇರಿಸಿದರು. ಆಗಸ್ಟ್‌ 1, 2015ರ ತನಕ ದೇಶದ ಸಂವಿಧಾನದಲ್ಲಿ 100ಬಾರಿ ತಿದ್ದುಪಡಿಗಳನ್ನು ಮಾಡಲಾಗಿದೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಭಾರತವನ್ನು ‘ಧರ್ಮ ನಿರಪೇಕ್ಷ’ ರಾಷ್ಟ್ರವನ್ನಾಗಿಸಬಹುದಾದರೆ, ಇಂತಹ ಸಂವಿಧಾನದ ತಿದ್ದುಪಡಿಯಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡಲು ಏಕೆ ಸಾಧ್ಯವಿಲ್ಲ?.” ಎಂದು ಮಾತನಾಡಿದರು.

ಸೌ.ಲಕ್ಷ್ಮೀ ಪೈ ಇವರು ಮಾತನಾಡಿ ” ಪರಾತ್ಪರ ಗುರು ಡಾ.ಆಠವಲೆಯವರು 1999ರ ಮಾರ್ಚ್ 23ರಂದು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಪರಾತ್ಪರ ಗುರು ಡಾ.ಆಠವಲೆಯವರು ಸಾಧಕರ ಶೀಘ್ರ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕೆಂದು ‘ಗುರುಕೃಪಾಯೋಗವನ್ನು’ ಹೇಳಿದರು. ಸಾಧನೆಯ ಸರ್ವಾಂಗವನ್ನು ಸ್ಪರ್ಶಿಸುವಂತಹ ವೈಜ್ಞಾನಿಕ ಪರಿಭಾಷೆಯಲ್ಲಿ ಗ್ರಂಥಸಂಪತ್ತನ್ನು ನಿರ್ಮಿಸಿದ್ದಾರೆ. ಆಧ್ಯಾತ್ಮಿಕ ಉಪಾಯಗಳು,ಆಪತ್ಕಾಲೀನ ಉಪಚಾರ, ಸಮ್ಮೋಹನ ಉಪಚಾರ ಮುಂತಾದ ವಿಷಯಗಳ ಬಗ್ಗೆ ಮಾರ್ಚ್ 2017ರ ತನಕ 299 ಗ್ರಂಥಗಳ 15 ಭಾಷೆಗಳಲ್ಲಿ 68 ಲಕ್ಷದ 39 ಸಾವಿರ ಪ್ರತಿಗಳು ಪ್ರಕಾಶಿತಗೊಂಡಿದೆ.

ಪರಾತ್ಪರ ಗುರು ಡಾ.ಆಠವಲೆಯವರು ಹಿಂದೂ ರಾಷ್ಟ್ರವನ್ನು ಪುರಸ್ಕರಿಸುವವರಾಗಿದ್ದಾರೆ‌. ಹಿಂದೂ ರಾಷ್ಟ್ರ ಸ್ಥಾಪನೆಯ ಸಂದೇಶವನ್ನು ಪ್ರಸಾರ ಮಾಡಲು ಅವರು ” ಸನಾತನ ಪ್ರಭಾತ” ನಿಯತಕಾಲಿಕೆಗಳನ್ನು ಪ್ರಾರಂಭಿಸಿದರು. ಡಾ.ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರದಿಂದ ಪ್ರೇರಣೆ ಪಡೆದು 7 ಅಕ್ಟೋಬರ್ 2002ರಂದು ‘ಹಿಂದೂ ಜನಜಾಗೃತಿ ಸಮಿತಿ’ ಸ್ಥಾಪನೆಯಾಯಿತು. ಪರಾತ್ಪರ ಗುರು ಡಾ.ಆಠವಲೆಯವರ ಮಾರ್ಗದರ್ಶನದಿಂದಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 14 ರಾಜ್ಯಗಳಲ್ಲಿ ಉಚಿತ ಧರ್ಮಶಿಕ್ಷಣ ವರ್ಗಗಳು, ದೂರಚಿತ್ರವಾಹಿನಿಗಳಿಗಾಗಿ ಧರ್ಮಸತ್ಸಂಗ, ಬಾಲ ಸಂಸ್ಕಾರ ವರ್ಗ, ಪ್ರಭೋಧನಾಪತ್ರಗಳು ಮುಂತಾದವುಗಳ ಮೂಲಕ 16 ಲಕ್ಷಕ್ಕಿಂತ ಹೆಚ್ಚಿನ ಹಿಂದೂಗಳಲ್ಲಿ ಜಾಗೃತಿ ಮೂಡಿದೆ.

ಹಿಂದೂ ಧರ್ಮದ ಜಗದ್ವ್ಯಾಪಿ ಪ್ರಸಾರ ಮಾಡಲು ಆಧ್ಯಾತ್ಮ ಸಂಶೋಧನೆ ಮಾಡಲು ಯುರೋಪ್, ಆಸ್ಟ್ರೇಲಿಯಾ ಮತ್ತು ಅಮೇರಿಕಾ ಖಂಡಗಳಲ್ಲಿ ‘ಸ್ವಿರಿಚ್ಯುವಲ್ ಸೈನ್ಸ್ ರೀಸರ್ಚ್ ಫೌಂಡೇಶನ್ ‘ ಎಂಬ ಸಂಸ್ಥೆಯ ಸ್ಥಾಪನೆ ಮಾಡಿದರು.ತಕ್ಷಶಿಲಾ ಮುಂತಾದ ಪ್ರಾಚೀನ ವಿದ್ಯಾಪೀಠಗಳಿಗೆ ಸಮನಾದ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ’ ಸ್ಥಾಪನೆ ಮಾಡಿ ಆಧ್ಯಾತ್ಮಿಕ ಉಚ್ಚ ಶಿಕ್ಷಣ ಮತ್ತು ಆಧ್ಯಾತ್ಮಿಕ ಸಂಶೋಧನೆಗಾಗಿ ಕಾರ್ಯನಿರವಿದೆ. ಎಂದು ಪರಾತ್ಪರ ಗುರು ಡಾ.ಆಠವಲೆಯವರ ಅದ್ವಿತೀಯ ಕಾರ್ಯದ ಬಗ್ಗೆ ತಿಳಿಸಿದರು.

ನ್ಯಾಯವಾದಿಗಳಾದ ಶ್ರೀ.ಚಂದ್ರಶೇಖರ್ ರಾವ್ ಇವರು ಮಾತನಾಡುತ್ತಾ ” ಒಂದಾನೊಂದು ಕಾಲದಲ್ಲಿ ವಿಶ್ವಗುರುವಾಗಿತ್ತು. 3ಜಿ ಭಾರತದಲ್ಲಿತ್ತು (ಗ್ರಾಮ, ಗುರುಕುಲ ಮತ್ತು ಗೋವು). ಗ್ರಾಮ ಸ್ವತಂತ್ರವಾಗಿತ್ತು, ಶಿಕ್ಷಣದಲ್ಲಿ 64ವಿದ್ಯೆ ಕಲಿಸುವ ಗುರುಕುಲ ಪದ್ದತಿ ಇತ್ತು. ಭಾರತದ ಶಿಲ್ಪಕಲೆಯನ್ನು ಕೆತ್ತಲೂ ಶಿಲ್ಪಿಯೂ ಕೂಡಾ ಪಿ.ಹಚ್.ಡಿ.ಯಂತಹ ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಗೋವು ಮಾತೆಯಾಗಿತ್ತು ಪ್ರತಿಯೊಬ್ಬರ ಮನೆಯಲ್ಲಿಯೂ ಗೋವನ್ನು ಸಾಕಲಾಗುತ್ತಿತ್ತು. ಜನರು ಸ್ವಾವಲಂಬಿಗಳಾಗಿದ್ದರು ಸ್ವದೇಶಿ ಉತ್ಪನ್ನಗಳ ಬಳಕೆಯಾಗುತ್ತಿತ್ತು.

ಆದರೆ ಪ್ರಸ್ತುತ ಕಾಲದಲ್ಲಿ ಮೆಕಾಲೆ ಶಿಕ್ಷಣ ಪದ್ದತಿಯಿಂದ ಗುರುಕುಲ ಶಿಕ್ಷಣ ಪದ್ದತಿಯ 64 ವಿದ್ಯೆಯ ಪ್ರವೀಣತೆಯು ಇಂದು ಕಂಡುಬರುತ್ತಿಲ್ಲ. ಇಂದು ವಿದೇಶದಲ್ಲಿ ಭಗವದ್ಗೀತೆಯ ಅಭ್ಯಾಸ ಮಾಡುವುದು ಮತ್ತು ಯೋಗವನ್ನು ಮಾಡುವುದು ಅಧ್ಯಯನ ದಲ್ಲಿ ಕಡ್ಡಾಯವಾಗಿ ಅಳವಡಿಸಲಾಗಿದೆ. ಆದರೆ ಭಾರತದಲ್ಲಿ ಇಂದು ಈ ಪದ್ದತಿ ಇಲ್ಲ. ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡೋಣ”. ಎಂದು ಕರೆನೀಡಿದರು‌.