Recent Posts

Sunday, January 19, 2025
ಸುದ್ದಿ

ಶ್ರೀ ನರಸಿಂಹ ವರ್ಮ ಬರೆದಿರುವ ‘ಆಕಾಶದ ಚಿತ್ರಗಳು’ಕವನ ಸಂಕಲನ ಸಮಾರಂಭ ಮೇ26 ರಂದು ಬಿಡುಗಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಕಾನೂನು ಅಧಿಕಾರಿಯಾಗಿರುವ ಶ್ರೀ ನರಸಿಂಹ ವರ್ಮ ಬರೆದಿರುವ ‘ಆಕಾಶದ ಚಿತ್ರಗಳು’ಕವನ ಸಂಕಲನ ಬಿಡುಗಡೆ ಸಮಾರಂಭವು ಮೇ26 ಭಾನುವಾರ ಬೆಳಗ್ಗೆ10.15 ಕ್ಕೆ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಲಿದೆ. ವಿಟ್ಲ ಅರಮನೆಯ ವಿ.ಆರ್. ನರಸಿಂಹ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ರಥಬೀದಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಕಾಶ್ಚಂದ್ರ ಶಿಶಿಲ, ವಿಠಲ.ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಅನಂತ ಕೃಷ್ಣ ಹೆಬ್ಬಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ, ಯುವ ಸಾಹಿತಿ ಶಿವಕುಮಾರ ಸಾಯ ಕೃತಿ ಪರಿಚಯ ಮಾಡಲಿದ್ದಾರೆ ಎಂದು ಪ್ರಕಾಶಕರಾದ ಶ್ರೀ ರಾಜಾರಾಮ ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು