Recent Posts

Sunday, January 19, 2025
ಸುದ್ದಿ

ಚುನಾವಣೆ ಫಲಿತಾಂಶ ಬರುವ ಮೊದಲೇ ಮುಂಬೈನಲ್ಲಿ ತಯಾರಿ: ನರೇಂದ್ರ ಮೋದಿ ಮುಖವಾಡ ಧರಿಸಿ ಲಡ್ಡು ತಯಾರಿಸುತ್ತಿರುವ ಅಂಗಡಿ ಸಿಬ್ಬಂದಿ – ಕಹಳೆ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿಯಿವೆ. ಚುನಾವಣೋತ್ತರ ಸಮೀಕ್ಷೆ ಸದ್ಯ ಚರ್ಚೆಯಲ್ಲಿದೆ. ಚುನಾವಣೆ ಫಲಿತಾಂಶ ಬರುವ ಮೊದಲೇ ಮುಂಬೈನಲ್ಲಿ ತಯಾರಿ ಜೋರಾಗಿದೆ. ಮುಂಬೈನ ಮಿಠಾಯಿ ಅಂಗಡಿಯೊಂದು ಬೋರಿವಲಿ ಕ್ಷೇತ್ರದ ಅಭ್ಯರ್ಥಿ ಗೋಪಾಲ್ ಶೆಟ್ಟಿಗಾಗಿ ಲಡ್ಡು ತಯಾರಿ ಶುರು ಮಾಡಿದೆ.

ಅಂಗಡಿ ಸಿಬ್ಬಂದಿ ನರೇಂದ್ರ ಮೋದಿ ಮುಖವಾಡ ಧರಿಸಿ ಲಡ್ಡು ತಯಾರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ, 1500-2000 ಕೆ.ಜಿ ಲಡ್ಡು ತಯಾರಿಸುವಂತೆ ಆರ್ಡರ್ ನೀಡಿದ್ದಾರಂತೆ. ಮೇ 23 ಕ್ಕಾಗಿ ಈ ಲಡ್ಡು ಸಿದ್ಧವಾಗ್ತಿದೆ. ಅವ್ರ ಗೆಲುವು ನಿಶ್ಚಿತ. ಅದಕ್ಕೆ ನಾವು ಕಾಯ್ತಿದ್ದೇವೆಂದು ಅಂಗಡಿ ಮಾಲೀಕ ಹೇಳಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಬೈ ಉತ್ತರ ಕ್ಷೇತ್ರದಲ್ಲಿ ಗೋಪಾಲ್ ಶೆಟ್ಟಿ ವಿರುದ್ಧ ಬಾಲಿವುಡ್ ನಟಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಸ್ಪರ್ಧಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಗೋಪಾಲ್ ಶೆಟ್ಟಿ ಗೆಲುವು ನಿಶ್ಚಿತ ಎನ್ನಲಾಗಿದೆ. ಇದು ತಿಳಿಯುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು