Friday, November 15, 2024
ಸುದ್ದಿ

ಮತ್ತೆ ಕಸಬ್​​​​ ಎಂಟ್ರಿಯಂಥ ಆತಂಕ, ಕಡಲಲ್ಲಿ ಪಾಕ್​ ಬೋಟ್​ ವಶಕ್ಕೆ..! – ಕಹಳೆ ನ್ಯೂಸ್

ಗುಜರಾತ್​: ಪಾಕಿಸ್ತಾನದ ಮೀನುಗಾರಿಕೆಯ ಅಲ್​-ಮದೀನ ಬೋಟ್​ನ ಭಾರತೀಯ ಕೋಸ್ಟ್​ ಗಾರ್ಡ್​ ಗುಜರಾತ್​ನ ಜಾಖಾ ಕೋಸ್ಟ್​ ಬಳಿ ವಶಕ್ಕೆ ಪಡೆದಿದೆ. ಬೋಟ್​ನಲ್ಲಿ ಅಕ್ರಮವಾಗಿ 194 ಪ್ಯಾಕೆಟ್​ ಡ್ರಗ್​ ಮಾದರಿಯ ನಾರ್ಕೋಟಿಗ್​ ವಸ್ತುವನ್ನು ಸಾಗಿಸಲಾಗುತ್ತಿತ್ತು. ಅಲ್ಲದೇ  26/11/2008 ರ ಮುಂಬೈ ಮಾದರಿ ದಾಳಿಯಲ್ಲಿ ಕಸಬ್​ ಅಂಡ್ ಗ್ಯಾಂಗ್​ ರೀತಿ ಮತ್ತೆ ಉಗ್ರರೇನಾದರೂ ಬರ್ತಿರಬಹುದಾ? ಅನ್ನೋ ಆತಂಕಕ್ಕೂ ಈ ಬೋಟ್ ಕಾರಣವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ತತ್​ತಕ್ಷಣ ಕಾರ್ಯಪ್ರವೃತ್ತರಾದ ಭಾರತೀಯ ಕಡಲು ಗಡಿ ರಕ್ಷಣಾ ಪಡೆ ಯೋಧರು ಈ ಬೋಟನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಸದ್ಯ ನಾರ್ಕೋಟಿಕ್​​​ ಪ್ಯಾಕೆಟ್​ಗಳನ್ನು ​ವಶಕ್ಕೆ ಪಡೆಯಲಾಗಿದ್ದು, ಜೊತೆಗೆ ಬೋಟ್​ನಲ್ಲಿದ್ದ 6 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ಭಾರತೀಯ ಕೋಸ್ಟ್​ ಗಾರ್ಡ್ ಈ ಬಗ್ಗೆ  ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರ ಬೀಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಬಂದಿರುವ ಮಾಹಿತಿ ಪ್ರಕಾರ, ವಶಕ್ಕೆ ಪಡೆಯಲಾಗಿದ್ದ ಬೋಟ್​ನಲ್ಲಿ 100 ಕೆಜಿಯಷ್ಟು ಹೆರಾಯಿನ್ ಸಾಗಿಸಲಾಗುತ್ತಿತಂತೆ. ಸದ್ಯ ಅಧಿಕಾರಿಗಳು ಅಷ್ಟೂ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ​