Monday, January 20, 2025
ರಾಜಕೀಯಸುದ್ದಿ

4ಗಂಟೆ ತಡವಾಗಬಹುದು ಲೋಕಸಭೆ ಚುನಾವಣಾ ಫಲಿತಾಂಶ – ಕಹಳೆ ನ್ಯೂಸ್

ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಅಂತಾ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23ರಂದು ಬೆಳಗ್ಗೆ 8ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ನಂತರ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಅಂತಾ ತಿಳಿಸಿದ್ದಾರೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ 28 ಮತ ಎಣಿಕೆ ಕೇಂದ್ರಗಳನ್ನು ಸಿದ್ಧತೆಮಾಡಲಾಗಿದ್ದು, ಮತ ಎಣಿಕೆಗೆ 3,324 ಟೇಬಲ್‍ಗಳನ್ನು ಸಿದ್ದಪಡಿಸಿದ್ದಾರೆ. 11,000 ಸಾವಿರಕ್ಕೂ ಹೆಚ್ಚು ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದರಂತೆ ವಿವಿ ಪ್ಯಾಟ್ ಮತಯಂತ್ರಗಳ ಮತಗಳನ್ನು ಎಣಿಕೆ ಮಾಡಿ ಇವಿಎಂ ಯಂತ್ರಗಳ ಮತಗಳ ಜತೆ ತಾಳೆ ಮಾಡಿ ತೋರಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು 31 ಮತಗಟ್ಟೆಗಳಲ್ಲಿ ಅಣಕು ಮತದಾನದ ಮತಗಳನ್ನು ಸರಿಪಡಿಸಲಿಲ್ಲ. ಹಾಗಾಗಿ ಆ ಮತ ಯಂತ್ರಗಳನ್ನು ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪ್ರಕಟಣೆ ಪ್ರಾರಂಭವಾಗುವ ನಿರೀಕ್ಷೆ ಇದೆ. ರಾತ್ರಿ ಏಳು ಗಂಟೆ ವೇಳೆಗೆ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬಹುದು. ಆದರೂ ಕೂಡ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಆದಷ್ಟು ಬೇಗ ಫಲಿತಾಂಶ ಪ್ರಕಟಣೆ ಮಾಡಲು ಪ್ರಯತ್ನಿಸುತ್ತೇವೆ. ಇನ್ನು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 98,000 ಅಂಚೆ ಮತಗಳು ಬಂದಿವೆ. ಈ ಬಾರಿ ಎಲೆಕ್ಟ್ರಾನಿಕ್ ಪೋಸ್ಟಲ್ ಬ್ಯಾಲೆಟ್‍ಗೂ ಅವಕಾಶ ಕೊಟ್ಟ ಕಾರಣದಿಂದ ಮತಪ್ರಮಾಣ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು