Monday, January 20, 2025
ಸಿನಿಮಾಸುದ್ದಿ

ಕೋಸ್ಟಲ್‍ವುಡ್‍ನಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕ್ಲ್ಯಾ(ಕ್ಲಾ)ಶ್!? – ಕಹಳೆ ನ್ಯೂಸ್

ಕೋಸ್ಟಲ್‍ವುಡ್ ಎಂದು ಕರೆಯಲ್ಪಡುವ ತುಳುಚಿತ್ರರಂಗದಲ್ಲಿ ಈ ಬಾರಿ ಅರ್ಧ ವರ್ಷವಾಗುವ ಹೊತ್ತಿಗೆ 5 ಸಿನೆಮಾಗಳು ತೆರೆಕಂಡು ಒಂದೆರಡು ಚಿತ್ರಗಳು ಮಾತ್ರ ಅಲ್ಪ ಮಟ್ಟದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗಿತ್ತು. ಇದೀಗ ಚಿತ್ರೀಕರಣ, ಬಾಕಿ ಉಳಿದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಾಲು ಸಾಲು ಚಿತ್ರಗಳು ತೆರೆಗಪ್ಪಳಿಸಲು ಅಣಿಯಾಗುತ್ತಿವೆ.

ಅಂತಹದರಲ್ಲಿ ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ಇಂಗ್ಲೀಷ್’, ರಜನೀಶ್ ದೇವಾಡಿಗರವರ ‘ಬೆಲ್ಚಪ್ಪ’ ಪ್ರಮುಖ ಚಿತ್ರಗಳು. ಆದರೆ ಈ ಎರಡು ಚಿತ್ರಗಳ ನಡುವೆ ಏನೋ ಭಿನ್ನಾಭಿಪ್ರಾಯಗಳಿರುವಂತೆ ಕಂಡುಬರುತ್ತಿದೆ ಎಂಬ ಸಂದೇಹಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಎರಡು ಚಿತ್ರತಂಡಗಳು ರಿಲೀಸ್ ಮಾಡಿರುವ ಪೋಸ್ಟರ್ ಮತ್ತು ಕ್ಯಾಪ್ಷನ್‍ಗಳಿಂದ ತಿಳಿದುಬರುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರಜ್ ಶೆಟ್ಟಿ ‘ಅಮ್ಮೆರ್ ಪೊಲೀಸ’ ಚಿತ್ರದ ಮೊದಲೇ ಇಂಗ್ಲೀಷ್ ಚಿತ್ರದ ಪೋಸ್ಟರ್ ಅನ್ನು ಲಾಂಚ್ ಮಾಡಿದ್ದರು. ಅದರಲ್ಲಿ ಉಪ ಶೀರ್ಷಿಕೆಯಾಗಿ ಎಂಕ್ ಬರ್ಪುಜ್ಜಿ ಬ್ರೋ! ಎಂದು ನಮೂದಿಸಲಾಗಿತ್ತು. ಆದರಿದೀಗ ಬೆಲ್ಚಪ್ಪ ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್ ಒಂದರಲ್ಲಿ ಇಂಗ್ಲೀಷ್ ಎಂಕ್ ಬರ್ಪುಂಡು ಬ್ರೋ ಎಂದು ಬರೆಯಲಾಗಿತ್ತು. ಇದು ಪರೋಕ್ಷವಾಗಿ ಸೂರಜ್ ಶೆಟ್ಟಿ ಅವರ ಇಂಗ್ಲೀಷ್ ಚಿತ್ರಕ್ಕೆ ಉತ್ತರ ನೀಡಿದಂತಿತ್ತು ಎಂದು ತುಳು ಚಿತ್ರರಸಿಕರು ಅನುಮಾನ ವ್ಯಕ್ತಪಡಿಸಿದ್ದರು.

ಅದಾದಮೇಲೆ ನಿನ್ನೆ ಇಂಗ್ಲಿಷ್ ಚಿತ್ರ ತಂಡ ಹೊಸತಾಗಿ ಪೋಸ್ಟರ್ ಒಂದನ್ನು ಹರಿಯಬಿಟ್ಟು. ಮಳೆಗಾಲಕ್ಕೆ ಕಾಮಿಡಿ ಎಂಟರ್‍ಟೈನರ್ ಬರಲಿದೆ ಎಂಬುದಾಗಿ ಕ್ಯಾಪ್ಷನ್ ಹಾಕಿದ್ದರು. ಕೆಲವೇ ಹೊತ್ತಿನಲ್ಲಿ ಬೆಲ್ಚಪ್ಪ ತಂಡದಿಂದಲೂ ಹೊಸ ಪೋಸ್ಟರ್ ರಿಲೀಸ್ ಮಾಡಿ ಇಂಗ್ಲೀಷ್ ತಂಡ ಹಾಕಿದ್ದ ಕ್ಯಾಪ್ಷನನ್ನೇ ಹೋಲುವ ಕ್ಯಾಪ್ಷನನ್ನೇ ಹಾಕಿ ತುಳು ಸಿನಿಕರಸಿಕರಲ್ಲಿ ಅಚ್ಚರಿಗೆ ಕಾರಣವಾಯಿತು.

ಇಲ್ಲಿ ಸೂರಜ್ ಶೆಟ್ಟಿಯನ್ನು ಟಾರ್ಗೆಟ್ ಮಾಡುತ್ತಿದ್ದಾರಾ ಎಂಬ ಅನುಮಾನ ಪ್ರೇಕ್ಷನನ್ನು ಕಾಡುತ್ತಿರುವುದು ಸುಳ್ಳಲ್ಲ. ತುಳು ಚಿತ್ರರಂಗಕ್ಕೆ ಇಂಗ್ಲೀಷ್ ಸಿನೆಮಾ ಮೂಲಕ ಲೆಜೆಂಡ್ ನಟ ಅನಂತ್‍ನಾಗ್‍ರನ್ನು ಸೂರಜ್ ಶೆಟ್ಟಿ ಕರೆತಂದಿರುವುದು, ಕೆಲವರಿಗೆ ಸಹಿಸಲಾಗುತ್ತಿಲ್ಲವೇನೊ! ಅದೂ ಅಲ್ಲದೆ ಸದ್ಯದ ಮಟ್ಟಿಗೆ ಕೋಸ್ಟಲ್‍ವುಡ್‍ನ ಏಕೈಕ ಬಹುಬೇಡಿಕೆಯ ನಟ ಡೇರಿಂಗ್ ಸ್ಟಾರ್ ಪೃಥ್ವಿ ಅಂಬರ್ ಜೊತೆಗೆ ಪಿಲಿಬೈಲ್ ಯಮುನಕ್ಕ ಆದಮೇಲೆ ಈ ಸಿನೆಮಾ ಮಾಡುತ್ತಿರುವುದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರಬಹುದು.

ಒಟ್ಟಿನಲ್ಲಿ ಯಾವುದೇ ಅಡೆತಡೆ, ಗೊಂದಲ-ಘರ್ಷಣೆಗಳಿಲ್ಲದೆ ಎಲ್ಲಾ ತುಳು ಚಿತ್ರಗಳು ಯಶಸ್ಸುಗಳಿಸಲಿ ಎಂಬುದೇ ಕಹಳೆ ನ್ಯೂಸ್ ಆಶಯ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್