Saturday, November 23, 2024
ರಾಜಕೀಯಸುದ್ದಿ

ಚುನಾವಣೆ: ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಹಣ, ಹೆಂಡ, ಡ್ರಗ್ಸ್​, ಆಭರಣ ಸೀಜ್ ಗೊತ್ತಾ..?! – ಕಹಳೆ ನ್ಯೂಸ್

ನವದೆಹಲಿ: ಹಣ ಅನ್ನೋ ಮಾಯಾವಿ ಬಡವರನ್ನ ಅಡ್ಕಾಯಿಸಿಕೊಂಡು ಹೊದ್ರೆ, ಶ್ರೀಮಂತರಿಗೆ ವರವಾಗಿ ಬರುತ್ತೆ.. ಹಣವೇ ತಮ್ಮ ತೋಳ್ಬಲ ಎಂದು ನಂಬಿ ರಾಜಕಾರಣಕ್ಕಿಳಿದವರ ಕಥೆ ಇದಾಗಿದೆ!

ಹಣ, ಹೆಂಡವೇ ಚುನಾವಣೆಯ ಜೀವಾಳ ಎಂದು ಭಾವಿಸಿದ್ದ ಕೆಲವು ರಾಜಕಾರಣಿಗಳ ಮನೆ ಮೇಲೆ, ಕಚೇರಿ ಸೇರಿದಂತೆ ವಿವಿಧಕಡೆ ಐಟಿ ಅಧಿಕಾರಿಗಳು ಹಾಗು ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಹಣ, ಹೆಂಡ, ಡ್ರಗ್ಸ್, ಚಿನ್ನ-ಬೆಳ್ಳಿ ವಿವಿಧ ಆಭರಣ ಹಾಗೂ ವಸ್ತುಗಳು ಸೇರಿದಂತೆ ಬರೋಬ್ಬರಿ 34,56,22,00,000 (Rs 3,456.33 crore) ಕೋಟಿ ಮೌಲ್ಯದ ವಸ್ತುಗಳನ್ನ ಸೀಜ್ ಮಾಡಲಾಗಿದೆ! ಸದ್ಯ ಈಗ ಸೀಜ್​​ ಮಾಡಲಾಗಿರುವ ಒಟ್ಟಾರೆ ಮೊತ್ತ, 2014 ರಲ್ಲಿ ಚುನಾವಣೆ ನಡೆಸಲು ಆಯೋಗ ಖರ್ಚು ಮಾಡಿದ ಮೊತ್ತದ 90% ನಷ್ಟಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹಣ ಹಾಗೂ ವಿವಿಧ ವಸ್ತುಗಳನ್ನ ಸೀಜ್​ ಮಾಡಲಾಗಿದೆ. ಅದ್ರಲ್ಲೂ ತಮಿಳುನಾಡಿನಲ್ಲಿ ಹಣದ ಹೊಳೆಯೇ ಹರಿದಿತ್ತು. ಡಿಎಂಕೆ ಮುಖಂಡನಿಗೆ ಸೇರಿದ್ದ 10.48 ಕೋಟಿ ಹಣವನ್ನ ಐಟಿ ಅಧಿಕಾರಿಗಳು ಸೀಜ್ ಮಾಡಿದ್ದರು. ಚುನಾವಣೆಯಲ್ಲಿ ಈ ಹಣವನ್ನ ಬಳಸಲು ಇಟ್ಟಿರೋದಾಗಿ ಸ್ಪಷ್ಟವಾಗಿದ್ದರಿಂದ ವೆಲ್ಲೂರು ಲೋಕಸಭೆ ಚುನಾವಣೆಯನ್ನೇ ಕ್ಯಾನ್ಸಲ್ ಮಾಡಲಾಗಿದೆ.

ದೇಶದಲ್ಲಿ ಕಳೆದ 38 ದಿನಗಳಿಂದ ಪ್ರಜಾಪ್ರಭುತ್ವದ ಹಬ್ಬ ಜೋರಾಗಿ ನಡೆದಿತ್ತು. ಈ ಹಬ್ಬವನ್ನ ಅಷ್ಟೇ ಪ್ರತಿಷ್ಠೆಯಾಗಿ ತೆಗೆದುಕೊಂಡ ಕೆಲವು ರಾಜಕಾರಣಿಗಳು ಹಣದ ಹೊಳೆಯನ್ನೇ ಹರಿಸಿ ವಿಜಯದ ಪತಾಕೆಯ ಬಾವುಟ ಹಾರಿಸಲು ಪ್ರಯತ್ನಿಸಿದ್ದಾರೆ. ಚುನಾವಣಾ ಆಯೋಗ ಓರ್ವ ಅಭ್ಯರ್ಥಿ 70 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಅನ್ನೋ ಆದೇಶವನ್ನ ಕಟ್ಟುನಿಟ್ಟಾಗಿ ಆದೇಶ ನೀಡಿದ್ದರೂ, ಕೆಲವು ರಾಜಕಾರಣಿಗಳು ಅಷ್ಟೇ ಶಿಸ್ತುಬದ್ಧವಾಗಿಯೇ ನಿಯಮವನ್ನ ಗಾಳಿಗೆ ತೂರಿದ್ದಾರೆ. ಇದು ಹೊಸದೇನಲ್ಲ, ಆದ್ರೆ ಚುನಾವಣಾ ಅಧಿಕಾರಿಗಳು ಈ ಬಾರಿಯ ಎಲೆಕ್ಷನ್ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೊಸ ದಾಖಲೆಯನ್ನ ಸೃಷ್ಟಿಸಿದ್ದಾರೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟು ಹಣ ಸೀಜ್..? 

ತಮಿಳುನಾಡು -9,519,800,000

ಗುಜರಾತ್ -5,527,800,00

ದೆಹಲಿ -4,261,000,000

ಪಂಜಾಬ್ -2,850,200,000

ಆಂಧ್ರಪ್ರದೇಶ -2,289,200,000

ಉತ್ತರ ಪ್ರದೇಶ -1,937,900,000

ಮಹಾರಾಷ್ಟ್ರ -1,670,700,000

ಪಶ್ಚಿಮ ಬಂಗಾಳ -1,156,400,000

ಮಧ್ಯ ಪ್ರದೇಶ -977,100,000

ಕರ್ನಾಟಕ – 882,800,000

ಒಟ್ಟು – 34,562,680,000

2014 ರ ಚುನಾವಣೆ
ಚುನಾವಣಾ ಆಯೋಗದ ಡೇಟಾ ಮಾಹಿತಿ ಪ್ರಕಾರ, ಚುನಾವಣಾ ಆಯೋಗ ಓರ್ವ ಅಭ್ಯರ್ಥಿ ಚುನಾವಣೆಗೆ ಖರ್ಚು ಮಾಡಲು 70 ಲಕ್ಷದವರೆಗೆ ಅವಕಾಶ ನೀಡಿದೆ. 2014 ರ ಚುನಾವಣೆಯಲ್ಲಿ 2,99,94,30,804 ರೂಪಾಯಿ ಸೀಜ್ ಮಾಡಲಾಗಿತ್ತು. ಆದರೆ ಪ್ರತಿ ಅಭ್ಯರ್ಥಿ ಕನಿಷ್ಟ ಎಂದರೂ 5 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. 2014 ರಲ್ಲಿ ಚುನಾವಣೆ ಆಯೋಗ 30,000 ಕೋಟಿ ಹಣವನ್ನ ಎಲೆಕ್ಷನ್​ಗಾಗಿ ಖರ್ಚು ಮಾಡಿತ್ತು. 12000 ಕೋಟಿ ಹಣವನ್ನ ಸೀಜ್ ಮಾಡಿತ್ತು. 2019 ರ ಚುನಾವಣೆಯಲ್ಲಿ 3,361 ಕೋಟಿ ಹಣವನ್ನ ಸೀಜ್ ಮಾಡಲಾಗಿದೆ. ಅಂದ್ಹಾಗೆ ಈ ಬಾರಿ 60000 ಕೋಟಿ ಹಣವನ್ನ ಚುನಾವಣಾ ಆಯೋಗ ಖರ್ಚು ಮಾಡುತ್ತಿದೆ ಎನ್ನಲಾಗಿದೆ.