Tuesday, January 21, 2025
ರಾಜಕೀಯಸುದ್ದಿ

ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ ಯಾರೂ ಹೆದರುವ ಅಗತ್ಯ ಇಲ್ಲ: ರಾಹುಲ್ ಗಾಂಧಿ ಟ್ವೀಟ್ – ಕಹಳೆ ನ್ಯೂಸ್

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್​ಡೌನ್​ ಶುರುವಾಗಿದೆ. ರಾಜಕೀಯ ಕಾರ್ಯಕರ್ತರ, ನಾಯಕರ ಎದೆಯಲ್ಲಿ ಢವ ಢವ ಮುಗಿಲುಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರನ್ನ ಹುರಿದುಂಬಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಟ್ವೀಟ್ ಮಾಡಿರುವ ಅವರು ‘ಆತ್ಮೀಯ ಕಾಂಗ್ರೆಸ್​ ಕಾರ್ಯಕರ್ತರೇ, ಮುಂದಿನ 24 ಗಂಟೆಗಳು ನಮಗೆ ಬಹಳ ಮುಖ್ಯವಾಗಿದೆ.

ಹೀಗಾಗಿ ಎಲ್ಲರೂ ಜಾಗರೂಕರಾಗಿರಿ. ಯಾರೂ ಹೆದರುವ ಅಗತ್ಯ ಇಲ್ಲ. ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೀರಿ. ಸುಳ್ಳು ಎಕ್ಸಿಟ್​ ಪೋಲ್ ಫಲಿತಾಂಶದ ಮೂಲಕ ಅಪಪ್ರಚಾರ ನಡೆಯುತ್ತಿದ್ದು ಯಾರೂ ನಿರಾಸೆಯಾಗದಿರಿ. ನಿಮ್ಮ ಮೇಲೆ ಹಾಗೂ ಕಾಂಗ್ರೆಸ್​ ಪಕ್ಷದ ಮೇಲೆ ನಂಬಿಕೆ ಇರಲಿ. ಪಕ್ಷಕ್ಕಾಗಿ ನೀವು ಮಾಡಿರುವ ನಿಷ್ಠೆಯ ಕೆಲಸ ಯಾವತ್ತೂ ವ್ಯರ್ಥ ಆಗಲ್ಲ. ಜೈ ಹಿಂದ್ ರಾಹುಲ್ ಗಾಂಧಿ ಎಂದು ಟ್ವೀಟ್ ಮಾಡಿದ್ದಾರೆ.  ನಿನ್ನೆಯಷ್ಟೇ ಕ್ರಾಂಗ್ರೆಸ್​ ಪ್ರಧಾನಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಕೂಡ ಇದೇ ರೀತಿ ಮಾತುಗಳನ್ನಾಡಿದ್ದರು. ಎಕ್ಸಿಟ್​ ಪೋಲ್​ ವರದಿಯಿಂದಾಗಿ ಕಾಂಗ್ರೆಸ್​ ನಾಯಕರು ಆತಂಕಕ್ಕೆ ಒಳಗಾಗಿದ್ದಾರಾ ಅನ್ನೋ ಪ್ರಶ್ನೆ ರಾಹುಲ್ ಗಾಂಧಿ ಈ ಟ್ವೀಟ್​ನಿಂದ ಮೂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು