Tuesday, January 21, 2025
ರಾಜಕೀಯಸುದ್ದಿ

ಚುನಾವಣೆ ಅಕ್ರಮದಲ್ಲಿ ಸುಪ್ರೀಂಕೋರ್ಟ್​ ಭಾಗಿಯಾಗಿದೆಯಾ? ಉದಿತ್ ರಾಜ್ ಹೊಸ ವಿವಾದ – ಕಹಳೆ ನ್ಯೂಸ್

ನವದೆಹಲಿ: ಚುನಾವಣೆ ಅಕ್ರಮದಲ್ಲಿ ಸುಪ್ರೀಂಕೋರ್ಟ್​ ಭಾಗಿಯಾಗಿದೆಯಾ? ಎಂದು ಪ್ರಶ್ನೆ ಮಾಡುವ ಮೂಲಕ ಕಾಂಗ್ರೆಸ್​ನ ದೆಹಲಿ ಎಂಪಿ ಉದಿತ್ ರಾಜ್ ಹೊಸ ವಿವಾದ ಒಂದನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಉದಿತ್​ ರಾಜ್ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಟ್ವೀಟ್ ಮಾಡಿರುವ ಉದಿತ್ ರಾಜ್, ಸುಪ್ರೀಂಕೋರ್ಟ್ ಎಲ್ಲಾ ವಿವಿಪ್ಯಾಟ್​ ಸ್ಲಿಪ್​ಗಳನ್ನ ಏಣಿಕೆ ಮಾಡಲು ಯಾಕೆ ಬಯಸಿಲ್ಲ? ಸುಪ್ರೀಂಕೋರ್ಟ್​ ಕೂಟ ಅಕ್ರಮದಲ್ಲಿ ಭಾಗಿಯಾಗಿದ್ಯಾ? ಚುನಾವಣಾ ಸಂದರ್ಭದಲ್ಲಿ ಸುಮಾರು ಮೂರು ತಿಂಗಳ ಕಾಲ ಎಲ್ಲಾ ಸರ್ಕಾರಿ ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿತ್ತು. ಹೀಗಾಗಿ ಎರಡರಿಂದ ಮೂರು ದಿನಗಳವರೆಗೆ ಎಣಿಕೆ ಮಾಡಲು ಅದು ಯಾವ ವ್ಯತ್ಯಾಸವನ್ನು ಆಗಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ವಿವಿಪ್ಯಾಟ್​​ ಸ್ಲಿಪ್ ತಾಳೆ ಹಾಕುವ ಕೇಂದ್ರವನ್ನ ಎಲ್ಲೆಡೆ ತೆರೆಯುವಂತೆ  ಕಾಂಗ್ರೆಸ್​ ಆಗ್ರಹ ಮಾಡಿತ್ತು. ಇವಿಎಂಗಳಿಗೆ ಸಮನಾಗಿ ವಿವಿಪ್ಯಾಟ್​ ಸ್ಲಿಪ್ ಮಾಡುವಂತೆ ವಿರೋಧ ಪಕ್ಷಗಳು ಸಲ್ಲಿಸಿದ್ದ ಮನವಿಯನ್ನ ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಕೋರ್ಟ್​ನ ಈ ಆದೇಶದವನ್ನ ಖಂಡಿಸಲು ಹೋಗಿ ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ. ಆದರೆ ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು