Sunday, January 19, 2025
ಅಂಕಣ

ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 38

ಕತ್ತಲು ಕಳೆಯಲು ಮಲಗಿತು ಭುವಿಯು
ಬೆಳಕದು ಮೂಡಲು ಪ್ರಕೃತಿಯ ಮಡಿಲು
ಕಣ್ಣನು ತೆರೆದನು ಕವಿ ರಸಗವಳ
ಅರಳದೆ ಬಾನಂಗಳ ತಿಳಿಜಲವಿಹ ಹವಳ

ರವಿಯು ಮುಖವು ಕಾಣಲಿಲ್ಲ ಕವಿಯ ಕಣ್ಣಿಗೆ
ಕವಿಯ ಕವಿತೆ ಕೇಳಲಿಲ್ಲ ರವಿಯ ರಶ್ಮಿಗೆ
ಬೆಣ್ಣೆ ಮುದ್ದೆಯಾಗಿ ಮಾಡಿದ ಆಗಿ ಗಡಿಬಿಡಿ
ಬಾನಿನಲ್ಲಿ ತೇಲಿಹೋದ ಶಶಿಗೆ ಸಿಡಿಮಿಡಿ

ಜಾಹೀರಾತು
ಜಾಹೀರಾತು
ಜಾಹೀರಾತು

ಕುವರಿ ಎಷ್ಟು ಚಂದವಿರಲು ಸ್ವಲ್ಪ ಸಿಡಿಮಿಡಿ
ಹೆಸರು ಸೌಮ್ಯವಿದ್ದರು ಮಾತು ಸಿಡಿಮಿಡಿ
ಬಾಯಿಪಾಠ ಸಹಜ ಮನದಿ ಗಿಳಿಯ ತೆರದಲಿ
ಮೂರ್ತಿವೆತ್ತ ರೂಪ ಮನದಿ ನಿಜದ ಜಗದಲಿ

ಜಾಹೀರಾತು
ಜಾಹೀರಾತು
ಜಾಹೀರಾತು

ಮನಸು ಕನವರಿಸುತಿದೆ ನಿಜ ಪಾದರಸವು
ಹೃದಯ ದೇಗುಲವಹುದು ಬದುಕು ನೀರಸವು
ನೋಡಿಕಲಿ ಕೇಳಿ ತಿಳಿ ಗಡಿಬಿಡಿಯು ಬೇಡ
ಕಣ್ಣು ತೆರೆಸುವ ಹೃದಯ ಬಾಂದಳವು ಕೂಡ

Leave a Response