Tuesday, January 21, 2025
ರಾಜಕೀಯಸುದ್ದಿ

ಇವಿಎಂ ಮಷಿನ್​ಗಳನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ : ಐಪಿಎಸ್​ ಅಧಿಕಾರಿ ಡಿ. ರೂಪಾ – ಕಹಳೆ ನ್ಯೂಸ್

ಇವಿಎಂ ಮಷಿನ್​ಗಳನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ ಅಂತಾ ಐಪಿಎಸ್​ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್​ ಮಾಡಿರುವ ಅವರು, ಇವಿಎಂ ಹ್ಯಾಕ್​ ಮಾಡುವುದು ಅಸಾಧ್ಯ. ಚುನಾವಣೆಯಲ್ಲಿ ಕೆಲಸ ಮಾಡಿರುವ ಎಲ್ಲಾ ಐಎಎಸ್​ ಅಧಿಕಾರಿಗಳು ಹಾಗೂ ಆಡಳಿತಾತ್ಮಕ ಸೇವೆಯಲ್ಲಿರುವ ಎಲ್ಲಾ ರಾಜ್ಯದ ಅಧಿಕಾರಿಗಳಿಗೂ ಆ ಬಗ್ಗೆ ಗೊತ್ತು. ನಾವೆಲ್ಲರೂ ಮಷಿನ್​ಗಳ ಮೂಲಕ ಚುನಾವಾಣೆ ಎದುರಿಸುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ. ಇವಿಎಂಗಳು ಹ್ಯಾಕ್​ ಆಗ್ತಿವೆ ಅಂತಾ ಹೇಳುವುದು ಅನ್ಯಾಯ. ಯಾಕೆಂದ್ರೆ ಚುನಾವಣಾ ಪೂರ್ವ, ಮತದಾನದ ದಿನ ಹಾಗೂ ಚುನಾವಣಾ ನಂತರ ಇವಿಎಂಗಳು ಅಧಿಕಾರಿಗಳ ಕೊಠಡಿಯಲ್ಲಿರುತ್ತವೆ. ಚುನಾವಣೆ ನಡೆಸಲು ಅಧಿಕಾರಿಗಳು ಬೆವರು ಸುರಿಸುತ್ತಾರೆ ಹೊರತು ರಾಜಿಯಾಗಲ್ಲ. ಅಧಿಕಾರಿಗಳು ತಮ್ಮ ಕೆಲಸ ಬಿಟ್ಟು, ಕೆಲಸಕ್ಕೇ ಕುತ್ತು ತರುವ ಸಾಹಸ ಮಾಡಲ್ಲ ಅಂತಾ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಈ ಟ್ವೀಟ್​ ರಾಜಕೀಯ ಪ್ರಸ್ತಾಪದಲ್ಲ ಅಂತಾ ಹೇಳಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು