Sunday, November 24, 2024
ರಾಜಕೀಯಸುದ್ದಿ

ಎಲೆಕ್ಷನ್ ಕೌಂಟಿಂಗ್ ಹೇಗೆ ನಡೆಯುತ್ತೆ ಗೊತ್ತಾ..? – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಒಟ್ಟು 28 ಮತ ಎಣಿಕಾ ಕೇಂದ್ರಗಳಿದ್ದು, ಆ ಪೈಕಿ 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು ಸೇರಿ 11 ಸಾವಿರದಷ್ಟು ಚುನಾವಣಾ ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. ಇನ್ನು 28 ಮತ ಎಣಿಕೆ ಕೇಂದ್ರಗಳಲ್ಲಿ  4,215 ಸುತ್ತಿನ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ಸುತ್ತಿನ ಎಣಿಕೆಗೂ ಸುಮಾರು 20 ನಿಮಿಷದ ಅವಧಿ ಬೇಕಾಗುತ್ತೆ. ಈ ಲೆಕ್ಕಾಚಾರದ ಅನುಸಾರ, ಮಧ್ಯಾಹ್ನ 12ರ ಸುಮಾರಿಗೆ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ನಂತರ, ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ 5 ವಿವಿಪ್ಯಾಟ್​​​ ಮತವನ್ನ ಲೆಕ್ಕ ಹಾಕಬೇಕಿರುವುದರಿಂದ ಫಲಿತಾಂಶ ಪ್ರಕಟಗೊಳ್ಳಲು ಹೆಚ್ಚುವರಿ ನಾಲ್ಕು ಗಂಟೆ ಬೇಕಾಗಲಿದೆ.  ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳೋ ಮತ ಎಣಿಕೆಯಲ್ಲಿ ಮೊದಲ ಅರ್ಧ ಗಂಟೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ, ಇವಿಎಂ ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಈ ಬಾರಿ ವಿಶೇಷ ಮೆಸೆಂಜರ್ ವ್ಯವಸ್ಥೆ ಅಳವಡಿಸಿದ್ದು, ಅಂಚೆ ಮತದಾನದಿಂದ ಇಲ್ಲಿಯವರೆಗೆ ಒಟ್ಟು 98, 606 ಅಂಚೆ ಮತಗಳನ್ನು ಸ್ವೀಕರಿಸಲಾಗಿದೆ. 

ಇನ್ನು ರಾಜ್ಯದಲ್ಲಿ ಏಪ್ರಿಲ್​ 18 ಹಾಗೂ 23ರಂದು ನಡೆದ ಎರಡು ಹಂತಗಳ ಚುನಾವಣೆಯಲ್ಲಿ ಒಟ್ಟು 3,50,31,495 ಮಂದಿ ಮತ ಚಲಾವಣೆ ಮಾಡಿದ್ದು, ಶೇ.68.61ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ ಅತೀ ಹೆಚ್ಚು ಶೇ.80.23, ದಕ್ಷಿಣ ಕನ್ನಡದಲ್ಲಿ ಶೇ. 77.90 ಹಾಗೂ ತುಮಕೂರು ಕ್ಷೇತ್ರದಲ್ಲಿ ಶೇ.77.90ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ. 53.47ರಷ್ಟು ಮತದಾನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು