Sunday, November 24, 2024
ರಾಜಕೀಯಸುದ್ದಿ

‘ಗದ್ದುಗೆ’ ಲೆಕ್ಕಾಚಾರ..! ರಾಜಕೀಯ ಪಕ್ಷಗಳ ಪ್ಲಾನ್​​ ಏನು? – ಕಹಳೆ ನ್ಯೂಸ್

ನವದೆಹಲಿ : ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಅಭ್ಯರ್ಥಿಗಳು ಮಾತ್ರವಲ್ಲದೇ ಇಡೀ ದೇಶದ ಜನತೆಗೆ ಇಂದಿನ ಫಲಿತಾಂಶ ಏನಾಗುತ್ತೋ ಏನೋ ಅನ್ನೋ ಕುತೂಹಲ ಇದೆ. ಇಂದು ಸಂಜೆಯ ವೇಳೆಗೆ ದೇಶದ ಆಡಳಿತ ಚುಕ್ಕಾಣಿ ಈ ಬಾರಿ ಯಾರ ಕೈಗೆ ಸಿಗಲಿದೆ? ಅನ್ನೋ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲಿದೆ . ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಗೆಲ್ಲಲಿದೆ.? ಎಲ್ಲಾ ಪಕ್ಷಗಳ ರಾಜಕೀಯ ಲೆಕ್ಕಾಚಾರವೇನು? ಮೋದಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅತಂತ್ರ ಫಲಿತಾಂಶ ಬಂದರೆ ಮಹಾಘಟಬಂಧನ್​ ನಡೆ ಏನು? ಅನ್ನೋದನ್ನ ನೋಡೋದಾದ್ರೆ, ಪ್ರಮುಖವಾಗಿ ಕೇಂದ್ರದಲ್ಲಿ ನಾಲ್ಕು ರೀತಿ ಫಲಿತಾಂಶ ಬರುವ ಸಾಧ್ಯತೆಗಳಿವೆ.

1. ಕಾಂಗ್ರೆಸ್‌ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ
ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಹೊರತು ಪಡಿಸಿ ಸಂಯುಕ್ತ ರಂಗ ಸರ್ಕಾರ ರಚಿಸಲು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವರು ಕಸರತ್ತು ನಡೆಸ್ತಿದ್ದಾರೆ. ಆದ್ರೆ ಸರ್ಕಾರ ರಚನೆಗೆ ಬೇಕಾದ ಬಹುಮತ ಸಿಕ್ಕೋದು ಕಷ್ಟ ಅಂತಾನೇ ಹೇಳಲಾಗ್ತಿದೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ ಸಂಯುಕ್ತ ರಂಗ ಸರ್ಕಾರ ರಚನೆಗೆ ಬೆಂಬಲ ನೀಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

2. ಎನ್‌ಡಿಎಗೆ ಸ್ಪಷ್ಟ ಬಹುಮತ

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಅಲೆ ಇನ್ನೂ ತಣ್ಣಗಾಗಿಲ್ಲ. ದೇಶದೆಲ್ಲೆಡೆ ಮೋದಿ ಹವಾ ಸಖತ್​ ವರ್ಕೌಟ್​ ಆಗ್ತಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಕೂಡ ಎನ್‌ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಅಂತಾ ಹೇಳಿರೋದ್ರಿಂದ ಮತ್ತೊಮ್ಮೆ ಎನ್​ಡಿಎ ಸುಲಭವಾಗಿ ಗೆದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.

3. ಬಿಜೆಪಿ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ
ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗದೇ ಇದ್ದಲ್ಲಿ ಬಿಜೆಪಿ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ ರಚನೆ ಮಾಡಲೂ ಬಹುದು. ಆದ್ರೆ ಸಂಯುಕ್ತ ರಂಗ ರಚನೆಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಬಿಜೆಪಿ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ ರಚನೆಯಾಗುವುದು ಬಹುತೇಕ ಅಸಾಧ್ಯ.

3. ಯುಪಿಎ ಅಧಿಕಾರಕ್ಕೆ
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಅಂತಾ ಹೇಳಿದೆ. ಆದ್ರೆ ಈ ಸಮೀಕ್ಷೆಗಳನ್ನೆಲ್ಲಾ ತಲೆಕೆಳಾಗುವಂತೆ ಮಾಡಿ ಯುಪಿಎ ಅಧಿಕಾರದ ಗದ್ದುಗೆ ಹಿಡಿಯಬಹುದು. ಒಂದು ವೇಳೆ ಯುಪಿಎಗೆ ಬಹುಮತ ಸಿಕ್ಕಿದ್ದೇ ಆದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಆದ್ರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದ್ರೆ, ಯುಪಿಎಗೆ ಸ್ಪಷ್ಟ ಬಹುಮತ ಸಿಗೋದು ಬಹುತೇಕ ಅಸಾಧ್ಯ.