Sunday, November 24, 2024
ರಾಜಕೀಯಸುದ್ದಿ

ಇವಿಎಂ ಮತ ಏಣಿಕೆ ವಿಚಾರವಾಗಿ ಕ್ಯಾತೆ ತೆಗೆದಿರುವ ವಿಪಕ್ಷ: ಆರು ಪ್ರಶ್ನೆ ಎಸೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ – ಕಹಳೆ ನ್ಯೂಸ್

ನವದೆಹಲಿ: ರಾಜಕೀಯ ನಾಯಕರ ಎದೆಯಲ್ಲಿನ ಏರಿಳಿತಗಳು ಹೆಚ್ಚಾಗುತ್ತಿವೆ. ನಾಳೆ ಬರುವ ಚುನಾವಣಾ ಫಲಿತಾಂಶ ಹೇಗಿರುತ್ತೋ ಅನ್ನೋ ಭಯವಂತೂ  ಶುರುವಾಗಿದ್ದು ಸುಳ್ಳಲ್ಲ. ಎಕ್ಸಿಟ್​ ಪೋಲ್ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಸದ್ಯ ವಿಪಕ್ಷ ಸ್ಥಾನದಲ್ಲಿರುವ ರಾಜಕೀಯ ನಾಯಕರಿಗೆ ತಳಮಳ ಆಗಿದೆ ಎನ್ನಲಾಗುತ್ತಿದೆ. ಇದೇ ಕಾರಣದಿಂದಲೇ ಇವಿಎಂ ವಿಚಾರವಾಗಿ ತಗಾದೇ ತೆಗೆದಿದೆ ಅಂತಾ ಬಿಜೆಪಿ ಆರೋಪಿಸಿದೆ.

ಇವಿಎಂ ಮತ ಏಣಿಕೆ ವಿಚಾರವಾಗಿ ಕ್ಯಾತೆ ತೆಗೆದಿರುವ ವಿಪಕ್ಷಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರು ಪ್ರಶ್ನೆಗಳನ್ನ ಎಸೆದಿದ್ದಾರೆ. ಈಗ ಇವಿಎಂ ವಿರೋಧ ಮಾಡುತ್ತಿರೋರು ದೇಶದ ಜನರ ಆಜ್ಞೆಗೆ ಅವಮಾನ ಮಾಡಿದಂತೆ. ತಮ್ಮ ಸೋಲಿನ ಭಯದಿಂದಾಗಿ 22 ವಿರೋಧ ಪಕ್ಷಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿದ್ದಾರೆ ಅಂತಾ ಆರೋಪಿಸಿ ಟ್ವಿಟರ್​ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
  1. EVMನ ವಿಶ್ವಾಸಾರ್ಹತೆ ಪ್ರಶ್ನಿಸಿದ ಹೆಚ್ಚಿನ ವಿರೋಧ ಪಕ್ಷಗಳು ತಾವು ಗೆಲುವು ಸಾಧಿಸಿದಾಗ ಆ ಫಲಿತಾಂಶವನ್ನು ಯಾಕೆ ಪರಿಗಣಿಸಿದವು. ಇವಿಎಂ ವಿರೋಧಿಸುವ ಪಕ್ಷಗಳು, ಅವುಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಯಾಕೆ ಅದೇ ಸೂತ್ರವನ್ನ ತೆಗೆದುಕೊಂಡವು..?
  2. ಇವಿಎಂ ವಿಚಾರದಲ್ಲಿ ಸುಪ್ರೀಂಕೋರ್ಟ್​ಗೆ ವಿಪಕ್ಷಗಳು ಪಿಐಎಲ್​ ಸಲ್ಲಿಸಿದ್ದವು. ದೇಶದ ಶ್ರೇಷ್ಠ ನ್ಯಾಯಾಲಯದಲ್ಲಿ ಸರಿಯಾದ ಆದೇಶವನ್ನೇ ನೀಡಿದೆ. ಹೀಗಿದ್ದೂ ವಿಪಕ್ಷಗಳು ಸುಪ್ರೀಂಕೋರ್ಟ್ ಆದೇಶವನ್ನೇ ಯಾಕೆ ಪ್ರಶ್ನೆ ಮಾಡುತ್ತಿವೆ?
  3. ಮತ ಎಣಿಕೆಗೆ 2 ದಿನ ಬಾಕಿ ಇರುವಾಗ 22 ಪ್ರತಿಪಕ್ಷಗಳು ಮತ ಏಣಿಕೆಯ ಪ್ರಕ್ರಿಯೆಯನ್ನ ಪ್ರಶ್ನೆ ಮಾಡಿರೋದು ಸಂವಿಧಾನ ಬಾಹಿರ. ಯಾಕಂದ್ರೆ ಎಲ್ಲಾ ಪಕ್ಷಗಳ ಒಮ್ಮತವಿಲ್ಲದೇ ಅಂತಹ ನಿರ್ಧಾರ ಸಾಧ್ಯವಿಲ್ಲ. ಆದ್ರೆ ವಿಪಕ್ಷಗಳು ಹೀಗೇಕೆ ಮಾಡುತ್ತಿವೆ?
  4. ದೇಶದಲ್ಲಿ 6 ಹಂತಗಳಲ್ಲಿ ಚುನಾವಣೆ ಮುಗಿದ ಮೇಲೆ ಇವಿಎಂ ವಿಚಾರದಲ್ಲಿ ಪ್ರತಿಪಕ್ಷಗಳು ತಗಾದೆ ತೆಗೆದಿವೆ. ಇದಕ್ಕೆ ಕಾರಣ ಎಕ್ಸಿಟ್​ ಪೋಲ್ ಫಲಿತಾಂಶ. ಎಕ್ಸಿಟ್​ ಪೋಲ್​ ಅನ್ನ ಸಂಸ್ಥೆಗಳು ಇವಿಎಂ ಮಷಿನ್​ಗಳ ಮೂಲಕ ಮಾಡಿಲ್ಲ. ಬದಲಾಗಿ ಮತದಾರರನ್ನ ಕೇಳುವ ಮೂಲಕ ಮಾಡಿದ್ದಾರೆ. ಎಕ್ಸಿಟ್​ ಪೋಲ್​ಗಳ ಸಮೀಕ್ಷೆ ಆಧಾರದ ಮೇಲೆ ನೀವು ಇವಿಎಂ ಮಷಿನ್​ಗಳನ್ನ ವಿಶ್ವಾಸಾಹರ್ತೆಯನ್ನ ಹೇಗೆ ಪ್ರಶ್ನೆ ಮಾಡುತ್ತೀರಿ?
  5. EVMನ ಅಡಚಣೆ ಸಂಬಂಧ ಚುನಾವಣಾ ಆಯೋಗ ಪೂರ್ವಭಾವಿ ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕವಾಗಿ ಸವಾಲು ಮತ್ತು ಅದರ ಕಾರ್ಯಕ್ಷಮತೆ ಬಗ್ಗೆ ಆಹ್ವಾನಿಸಿತ್ತು. ಆಗ ವಿರೋಧ ಪಕ್ಷಗಳು ಯಾಕೆ ಸುಮ್ಮನಿದ್ದವು. ಇವಿಎಂ ಪ್ರಕ್ರಿಯೆ ಪಾರದರ್ಶಕವಾಗಿದೆ ಅಂದ ಮೇಲೆ ಮತ್ತೆ ಅದರ ಮೇಲೆ ಸಂಶಯ ಮಾಡೋದು ಎಷ್ಟು ಸೂಕ್ತ?
  6. ಕೆಲ ವಿರೋಧ ಪಕ್ಷಗಳ ನಾಯಕರು ಚುನಾವಣಾ ಫಲಿತಾಂಶ ಅನುಕೂಲಕರವಾಗಿರದಿದ್ದರೆ, ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವುದು ಮತ್ತು ರಕ್ತ ಹರಿಸುವ ಬಗ್ಗೆ ಹೇಳಿಕೆಗಳನ್ನ ವಿರೋಧ ಪಕ್ಷದ ನಾಯಕರು ನೀಡುತ್ತಿದ್ದಾರೆ. ಹಿಂಸೆ ಮತ್ತು ನಿರಂಕುಶಧಿಕಾರಿ ಹೇಳಿಕೆಗಳ ಮೂಲಕ ಇವರು ಯಾರಿಗೆ ಸವಾಲು ಹಾಕುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು