Monday, November 25, 2024
ರಾಜಕೀಯಸುದ್ದಿ

ಮಂಡ್ಯ, ಹಾಸನ, ತುಮಕೂರು: ಮುನ್ನಡೆ ಕಾಯ್ದುಕೊಂಡ ನಿಖಿಲ್, ದೇವೇಗೌಡರಿಗೆ ಹಿನ್ನಡೆ – ಕಹಳೆ ನ್ಯೂಸ್

ಹಾಸನ: ಜೆಡಿಎಸ್ ಅಭ್ಯರ್ಥಿಗಳು ಪ್ರಜ್ವಲ್ ರೇವಣ್ಣಗೆ 1,24,212 ಮತಗಳು. 36987 ಅಂತರದ ಮುನ್ನಡೆ, ಬಿಜೆಪಿಯ ಮಂಜು () ಹಿನ್ನಡೆ

  • ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್‌ನ ಹೆಚ್.ಡಿ.ದೇವೇಗೌಡರಿಗೆ 40177 ಮತಗಳು, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು (40618) 441 ಮತಗಳ ಮುನ್ನಡೆ
  • ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ 36477 ಮತಗಳು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ (34575) 1902 ಮತಗಳ ಹಿನ್ನಡೆ
  • ಸುಮಲತಾಗೆ ಸುಮಲತಾರಿಂದಲೇ ತೊಡಕು: ಕ್ರಮಸಂಖ್ಯೆ 19 ಸುಮಲತಾ116, ಕ್ರಮಸಂಖ್ಯೆ 21 ಸುಮಲತಾ ಎಂ 99, ಕ್ರಮಸಂಖ್ಯೆ 22 ರ ಸುಮಲತಾಗೆ 32 ಮತಗಳು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸೋಲಿಸಲೆಂದೇ ಕಾಂಗ್ರೆಸ್-ಜೆಡಿಎಸ್ ದೋಸ್ತಿಕೂಟ ಹೆಣೆದಿದ್ದ ತಂತ್ರದಂತೆ ಮೂವರು ಸುಮಲತಾ ಹೆಸರಿನವರನ್ನು ಕಣಕ್ಕಿಳಿಸಲಾಗಿತ್ತು.
  • ಮಂಡ್ಯ-ಮೈಸೂರು ಹೆದ್ದಾರಿಯಲ್ಲಿರುವ ಯೂನಿಟರಿ ಯೂನಿವರ್ಸಿಟಿ ಆವರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಸುಮಲತಾ ಬೆಂಬಲಿಗರಾಗಿರುವ ರಾಕ್‌ಲೈನ್ ವೆಂಕಟೇಶ್ ಆಗಮಿಸಿದ್ದಾರೆ.
  • ಮಂಡ್ಯದ ದೋಸ್ತಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬೆಳಗ್ಗೆಯೇ ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದು, ಗೆಲುವಿಗೆ ಪ್ರಾರ್ಥಿಸಿದ್ದಾರೆ.

ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಭವಿಷ್ಯವೇನಾಗುತ್ತದೆ ಎಂಬುದು ರಾಜ್ಯ ಸರಕಾರದ ಭವಿಷ್ಯ ನಿರ್ಣಯಿಸುವ ಸಾಧ್ಯತೆಯೂ ಇದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಬೆಂಬಲವನ್ನೂ ಗಳಿಸಿರುವುದು ಈ ಕುತೂಹಲಕ್ಕೆ ಪ್ರಮುಖ ಕಾರಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸಿಗರ ವಿರೋಧದ ಸೂಚನೆಯೊಂದಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದರೆ, ಅವರ ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಗೌಡ ಪರಿವಾರವೇ ಇರುವುದು ಎಲ್ಲರ ಕುತೂಹಲಕ್ಕೆ ಪ್ರಮುಖ ಕಾರಣ.

* ಎಚ್‌ಎಂಟಿ (ಹಾಸನ, ಮಂಡ್ಯ, ತುಮಕೂರು) ಕ್ಷೇತ್ರಗಳ ಫಲಿತಾಂಶವೇ ಜೆಡಿಎಸ್‌ಗೆ ಮುಖ್ಯವಾಗಿದ್ದು, ಇಲ್ಲಿ ಸೋತರೆ ಎಚ್‌ಡಿಡಿ ಕುಟುಂಬಕ್ಕೆ ಭಾರಿ ಹಿನ್ನಡೆ.

*ಮಂಡ್ಯದಲ್ಲಿ ಸೋಲಾದರೆ ಇದನ್ನು ಸಿಎಂ ಕುಮಾರಸ್ವಾಮಿ ಗಂಭೀರವಾಗಿ ಪರಿಗಣಿಸಿ ಮಿತ್ರಪಕ್ಷದ ವಿರುದ್ಧ ತಿರುಗಿ ಬೀಳಬಹುದು.

*ಎಚ್‌ಎಂಟಿ ಕ್ಷೇತ್ರಗಳಲ್ಲಿ ಗೆಲುವಾದರೆ ಕುಟುಂಬ ರಾಜಕಾರಣಕ್ಕೆ ಜನರೇ ಮುದ್ರೆಯೊತ್ತಿದ್ದಾರೆಂದು ಭಾವಿಸಿ ಜೆಡಿಎಸ್‌ ಈ ವಿಚಾರದಲ್ಲಿ ನಾಗಾಲೋಟ ತೋರಬಹುದು.

*ದೋಸ್ತಿ ಮೈತ್ರಿಕೂಟಕ್ಕೆ ನಿರೀಕ್ಷಿತ ಸ್ಥಾನ ಬಾರದಿದ್ದರೆ ಕಾಂಗ್ರೆಸ್‌ ಸಹವಾಸವೇ ಬೇಡವೆಂದು ಬಿಜೆಪಿಯತ್ತ ಜೆಡಿಎಸ್‌ ಮುಖಮಾಡುವ ಸಾಧ್ಯತೆ.

*ಜೆಡಿಎಸ್‌ ಶಾಸಕರು, ಮುಖಂಡರ ವಲಯದಲ್ಲೂ ಅಸಮಾಧಾನವಿದೆ. ಪಕ್ಷಕ್ಕೆ ಹಿನ್ನಡೆಯಾದರೆ ಈ ಮುಖಂಡರು ಮೌನ ಮುರಿಯುವ ನಿರೀಕ್ಷೆ.