Tuesday, November 26, 2024
ರಾಜಕೀಯಸುದ್ದಿ

ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ, ಅಸೂಯೆ ಟ್ರೋಲ್​ಗಳು ಮಾತ್ರ ನನ್ನ ದಾರಿಗೆ ಬಂದಿವೆ: ಪ್ರಕಾಶ್​ ರಾಜ್​ ಟ್ವೀಟ್ – ಕಹಳೆ ನ್ಯೂಸ್

ಲೋಕಸಭಾ ಚುನಾವಣೆ 2019ರ ಫಲಿತಾಂಶ ಒಂದೊಂದಾಗಿಯೇ ಹೊರ ಬೀಳುತ್ತಿದೆ. ಘಟಾನುಘಟಿ ನಾಯಕರುಗಳು ಈ ಚುನಾವಣೆಯಲ್ಲಿ ಸೋಲಿನ ಕಹಿ ತಿನ್ನುತ್ತಿದ್ದಾರೆ. ಈ ನಡುವೆ ಮೊದಲಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದ ನಟ ಪ್ರಕಾಶ್​ ರಾಜ್​ಗೂ ಕೂಡಾ ತೀವ್ರ ನಿರಾಸೆಯಾಗಿದೆ. ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪ್ರಕಾಶ್​ ರಾಜ್​ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್​ನ ರಿಜ್ವಾನ್​ ಅರ್ಷದ್​ ಹಾಗೂ ಬಿಜೆಪಿಯ ಪಿ.ಸಿ ಮೋಹನ್​ಗೆ ನೇರಾ ನೇರಾ ಹಣಾಹಣಿ ನಡೆಯುತ್ತಿದೆ.

ಫಲಿತಾಂಶದ ಕುರಿತಂತೆ ಪ್ರಕಾಶ್​ ರಾಜ್​ ಟ್ವೀಟ್ ಮಾಡಿದ್ದಾರೆ. ‘ಈ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಅಸೂಯೆ.. ಟ್ರೋಲ್​ಗಳು ಮಾತ್ರ ನನ್ನ ದಾರಿಗೆ ಬಂದಿವೆ. ಆದ್ರೆ ನಾನು ನನ್ನ ಜಾಗದಲ್ಲೇ ನಿಲ್ಲುತ್ತೇನೆ. ಸೆಕ್ಯುಲರ್​ ಭಾರತಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಮುಂದೆ ತೀವ್ರ ಕಠಿಣ ಪಯಣವಿದೆ, ಅದಕ್ಕೆ ಇದು ಪ್ರಾರಂಭ ಮಾತ್ರ. ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಅಂತಾ ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು