ಕೈಲಾಗದ ರೈ ಮಯೆಲ್ಲಾ ಪರಿಚಿಕೊಂಡ | ಪ್ರಭಾಕರ್ ಭಟ್‌ಗೆ ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ – ಸಚಿವ ರಮಾನಾಥ ರೈ
ವಿರಾಜಪೇಟೆ : ಸಚಿವ ರಮಾನಾಥ ರೈ ಅವರು ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ವಿರುದ್ಧ ಕಿಡಿ ಕಾರಿದ್ದು, ‘ತಾಕತ್ತಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ, ಠೇವಣಿ ಉಳಿಸಿಕೊಳ್ಳಲಿ’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡಲಾಗುತ್ತಿದ್ದ ಅನುದಾನ ಸ್ಥಗಿತ ಗೊಳಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರ ಪ್ರಶ್ನಿಸಿದಾಗ ಕೆಂಡಾಮಂಡಲವಾಗಿದ್ದಾರೆ.
‘ಪ್ರಭಾಕರ ಭಟ್ ಅವರು ದಕ್ಷಿಣ ಕನ್ನಡದಲ್ಲಿ ನನ್ನ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದಾರೆ, ಆದರೆ ಅಲ್ಲಿನ ಜನ ನನ್ನೊಂದಿಗೆ ಇದ್ದಾರೆ’ಎಂದರು.
‘ಸರ್ಕಾರದ ನಿಯಮದಂತೆ ದೇವಸ್ಥಾನದ ಹಣ ದೇವಸ್ಥಾನಕ್ಕೇ ಖರ್ಚಾಗಬೇಕು. ಭಟ್ ದೇವಸ್ಥಾನದ ಹಣ ಪಡಯಲು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಾಕತ್ತಿದ್ದರೆ ಅವರು ನನ್ನ ವಿರುದ್ಧ ಸ್ಪರ್ಧಿಸಲಿ, ಅವರಿಗೆ ಠೇವಣಿಯೂ ಸಿಗುವುದಿಲ್ಲ’ ಎಂದರು.
2 ದಿನಗಳ ಹಿಂದೆ ಬಿಜೆಪಿ ಮುಖಂಡ ಹರಿ ಕೃಷ್ಣ ಬಂಟ್ವಾಳ್ ಅವರು ರಮನಾಥ ರೈ ಅವರು ಮುಖ್ಯಮಂತ್ರಿಗಳಿಗೆ ಅನುದಾನ ಸ್ಥಗಿತಗೊಳಿಸಲು ಕೋರಿ ಬರೆದಿದ್ದರು ಎನ್ನಲಾದ ಪತ್ರದ ಪ್ರತಿಯನ್ನು ಬಹಿರಂಗಪಡಿಸಿದ್ದರು. ಇದಕ್ಕೆ ಉತ್ತರ ನೀಡಲಾರದೆ ಸಚಿವ ರೈ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಕೈಲಾಗದವ ಮೈಯಲ್ಲಾ ಪರಚಿಕೊಂಡ ಎಂಬಂತಾಗಿದೆ.