ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದು, ಮೋದಿ ನೇತೃತ್ವದ ಎನ್ಡಿಎ ಒಕ್ಕೂಟ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ. ಎರಡನೇ ಬಾರಿ ಅಭೂತಪೂರ್ವ ಗೆಲುವಿನತ್ತ ಎನ್ಡಿಎ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದೇಶ-ವಿದೇಶಗಳಿಂದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೆಲಿಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚ್ಯುಕ್, ಫೋನ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ, ಟೆಲಿಫೋನ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಹ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ.
ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಹ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಅಪ್ಘಾನ್ ಭಾರತದ ಜೊತೆಗಿನ ಸಹಕಾರ ಸಂಬಂಧವನ್ನ ವೃದ್ಧಿಸಲು ಬಯಸುತ್ತದೆ ಎಂದಿದ್ದಾರೆ.
Congratulations to PM @narendramodi on a strong mandate from the people of India. The government and the people of Afghanistan look forward to expanding cooperation between our two democracies in pursuit of regional cooperation, peace and prosperity for all of South Asia.
ನರೇಂದ್ರಮೋದಿಗೆ ಅಭಿನಂದನೆಗಳು. ಭಾರತ ಜನರಿಂದ ಬಲವಾದ ಜನಾದೇಶದ ಮೇಲೆ ಚುನಾಯಿತಗೊಂಡಿದ್ದೀರಿ. ದಕ್ಷಿಣ ಏಷ್ಯಾದ ಎಲ್ಲಾ ಪ್ರಾದೇಶಿಕ ಸಹಕಾರ, ಶಾಂತಿ ಮತ್ತು ಸಮೃದ್ಧಿಯನ್ನು ಅನುಸರಿಸುವಲ್ಲಿ ನಮ್ಮ ಎರಡು ಪ್ರಜಾಪ್ರಭುತ್ವಗಳ ನಡುವಿನ ಸಹಕಾರವನ್ನು ವಿಸ್ತರಿಸಲು ಸರಕಾರ ಮತ್ತು ಅಫ್ಘಾನಿಸ್ತಾನದ ಜನರು ಎದುರು ನೋಡುತ್ತಾರೆ.
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
I extend warmest congratulations to Prime Minister @narendramodi ji for landslide election victory in the Lok Sabha Elections 2019. I wish all success ahead. I look forward to working closely with you. #PMOIndia
2019ರ ಚುನಾವಣೆಯಲ್ಲಿ ಗೆದ್ದ ನರೇಂದ್ರ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ. ಮುಂದೆಯೂ ನಿಮಗೆ ಯಶಸ್ಸು ಸಿಗಲೆಂದು ನಾನು ಆಶಿಸುತ್ತೇನೆ. ನಾನು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ. #PMOIndia