Wednesday, November 27, 2024
ರಾಜಕೀಯಸುದ್ದಿ

ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ವಿಟರ್​ ಖಾತೆಯ ಹೆಸರಿನಲ್ಲಿದ್ದ ‘ಚೌಕಿದಾರ್​’ ಅನ್ನೋ ಪದವನ್ನ ತೆಗೆದಿದ್ಯಾಕೆ ಮೋದಿ – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ತಮ್ಮ ಟ್ವಿಟರ್​ ಖಾತೆಯ ಹೆಸರನ್ನ ಬದಲಾವಣೆ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ವಿಟರ್​ ಖಾತೆಯ ಹೆಸರಿನಲ್ಲಿದ್ದ ‘ಚೌಕಿದಾರ್​’ (ಕಾವಲುಗಾರ) ಅನ್ನೋ ಪದವನ್ನ ತೆಗೆದು ಹಾಕಿ, ಮೊದಲಿದ್ದಂತೆ @narendramodi ಎಂದು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಟ್ವೀಟ್​ ಮಾಡಿರುವ ಮೋದಿ, ‘ಚೌಕಿದಾರ್’ ಅನ್ನೋ ಸ್ಪೀರಿಟ್​ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಸಮಯ ಬಂದಿದೆ. ಇದೇ ಸ್ಪಿರೀಟ್ ಭಾರತದ ಅಭಿವೃದ್ಧಿಯನ್ನ ಮುಂದುವರಿಸಲು ಜೀವಂತವಾಗಿಟ್ಟುಕೊಳ್ಳೋಣ. ಚೌಕಿದಾರ್’ ಎಂಬ ಪದವು ನನ್ನ ಟ್ವಿಟ್ಟರ್ ಹೆಸರನ್ನು ಬಿಟ್ಟು ಹೋಗುತ್ತದೆ. ಆದರೆ ಅದು ನನ್ನ ಅವಿಭಾಜ್ಯ ಭಾಗವಾಗಿ ಉಳಿದಿದೆ. ನೀವು ಕೂಡ ಚೌಕಿದಾರ್ ಅನ್ನೋ ಪದವನ್ನ ತೆಗೆಯಿರಿ ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಕಾಂಗ್ರೆಸ್​ ಪ್ರಧಾನಿ ಮೋದಿ ಆಡಳಿತವನ್ನ ಟೀಕಿಸುವ ಭರದಲ್ಲಿ ‘ಚೌಕಿದಾರ್ ಚೋರ್ ಹೈ’ ಅನ್ನೋ ಪದವನ್ನ ಬಳಸಿತ್ತು. ಆದರೆ ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡ ಬಿಜೆಪಿ ನಾಯಕರು ದೇಶದ ಪ್ರತಿಯೊಬ್ಬ ನಾಗರಿಕರೂ ‘ಚೌಕಿದಾರ’ರೇ ಅಂತಾ ‘ಚೌಕಿದಾರ್’ ಅನ್ನೋ ಹೊಸ ಅಭಿಯಾನವನ್ನೇ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಬಿಜೆಪಿಯ ಎಲ್ಲಾ ನಾಯಕರು ಫೇಸ್​ಬುಕ್ ಹಾಗೂ ಟ್ವಿಟರ್​ ಪ್ರೊಫೈಲ್ ಅಕೌಂಟ್​ನಲ್ಲಿ ‘ಚೌಕಿದಾರ್’ ಅನ್ನೋ ಪದವನ್ನ ಬರೆದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು