Sunday, January 19, 2025
ಸುದ್ದಿ

ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು! – ಕಹಳೆ ನ್ಯೂಸ್

 

ಮೈಸೂರು: ಹುಣಸೂರಿನಲ್ಲಿ ಹನುಮ ಜಯಂತಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಜಿದ್ದಿಗೆ ಬಿದ್ದಿದ್ದ ಮೈಸೂರು ಪೊಲೀಸರಿಗೆ ನ್ಯಾಯಾಲಯ ತಪರಾಕಿ ಹಾಕಿದೆ.
ಹೌದು. ಪ್ರತಾಪ್ ಸಿಂಹ ಮೈಸೂರಿನಿಂದ ಡಿಸೆಂಬರ್ 3 ರಂದು ಹುಣಸೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಬಿಳಿಕೆರೆ ಬಳಿ ತಡೆದು ಬಂಧಿಸಿದ್ದರು. ಬಂಧಿಸಿದ ಬಳಿಕ ಐಪಿಸಿ ಸೆಕ್ಷನ್ 188(ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧಿಕಾರಿಗಳು ಜಾರಿ ಮಾಡಿದ ಸ್ಥಳದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದರೆ ಈ ಸೆಕ್ಷನ್ ಹಾಕಬಹುದು. ನಿಷೇಧಾಜ್ಞೆ ಅವತ್ತು ವಿಧಿಸಿದ್ದು ಹುಣಸೂರು ಪಟ್ಟಣದಲ್ಲಿ. ಆದರೆ ಸಂಸದರನ್ನು ಪೊಲೀಸರು ಹುಣಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲೇ ವಶಕ್ಕೆ ಪಡೆದು ಬಂಧಿಸಿದ್ದರು. ಸಂಸದ ಪ್ರತಾಪ್ ಸಿಂಹ ನಿಷೇಧಾಜ್ಞೆ ಉಲ್ಲಂಘಿಸದೇ ಇದ್ದರೂ ಎಫ್‍ಐಆರ್ ನಲ್ಲಿ ಸೆಕ್ಷನ್ 188 ಹಾಕಿದ್ದರು. ಅದೇ ಎಫ್‍ಐಆರ್ ಹುಣಸೂರಿನ ಜಿಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಆಗಿತ್ತು. ಎಫ್‍ಐಆರ್ ಸಲ್ಲಿಕೆ ಮಾಡಿದ ಬಳಿಕ ಪೊಲೀಸರಿಗೆ ತಮ್ಮ ತಪ್ಪಿನ ಅರಿವು ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 5ರಂದು ಪೊಲೀಸರು ಎಫ್‍ಐಆರ್ ನಲ್ಲಿ ಐಪಿಸಿ ಸೆಕ್ಷನ್ 188 ಕೈ ಬಿಡುತ್ತೇವೆ. ಇದು ತಪ್ಪಾಗಿ ಸೇರಿದೆ ಎಂದು ಘನ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆಗ ನ್ಯಾಯಾಧೀಶರು, ಎಫ್‍ಐಆರ್ ನಲ್ಲಿ ಐಪಿಸಿ ಸೆಕ್ಷನ್ ತಪ್ಪಾಗಿ ಹೇಗೆ ನೀವು ಸೇರಿಸಿದ್ದೀರಿ? ಇದಕ್ಕೆ ಕಾರಣ ಏನು? ಈಗ ಯಾಕೆ ಆ ಸೆಕ್ಷನ್ ಕೈ ಬಿಡಬೇಕೆಂದು ಕೇಳುತ್ತಿದ್ದೀರಿ? ಈ ಎಲ್ಲ ಪ್ರಶ್ನೆಗಳಿಗೆ ಪ್ರಕರಣದ ತನಿಖಾಧಿಕಾರಿಯೇ ಡಿಸೆಂಬರ್ 8 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಉತ್ತರ ನೀಡಬೇಕು ಎಂದು ಆದೇಶಿಸಿತ್ತು. ಡಿ.8 ರಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಹೋಗಿ ಸ್ಪಷ್ಟೀಕರಣ ಕೊಡಲಿಲ್ಲ. ಹೀಗಾಗಿ ನ್ಯಾಯಾಧೀಶರು ಡಿಸೆಂಬರ್ 8 ರಂದು ಸೆಕ್ಷನ್ ವಾಪಸ್ ಪಡೆಯುವ ಪೊಲೀಸರ ಅರ್ಜಿಯನ್ನು ರದ್ದು ಮಾಡಿದ್ದಾರೆ.

ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ರಾ?
ವಿಚಾರಣೆಗೆ ಗೈರು ಹಾಜರಿ ಹಾಕಿದ್ದನ್ನು ನೋಡಿದಾಗ ಸೆಕ್ಷನ್ 188 ಹಾಕಿದ್ದಕ್ಕೆ ಮತ್ತು ಅದನ್ನು ಕೈ ಬಿಡುವುದಕ್ಕೆ ತನಿಖಾಧಿಕಾರಿ ಬಳಿ ಸೂಕ್ತ ಸಮಜಾಯಿಷಿ ಇರಲಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಹೀಗಾಗಿ ಮೈಸೂರು ಎಸ್‍ವಿ ರವಿ ಚನ್ನಣ್ಣನವರ್ ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಆರೋಪ ಮಾಡಿ ಕೇಸ್ ಹಾಕಿದ್ದಾರೆ. ಎಸ್‍ಪಿ ಅವರ ಮಾತಿನಲ್ಲಿ ದುರುದ್ದೇಶವಿದೆ ಎನ್ನುವ ಪ್ರತಾಪ್ ಸಿಂಹ ಆರೋಪಗಳು ಸತ್ಯವಾದಂತೆ ಕಾಣುತ್ತಿವೆ.

ನಿಷೇಧಾಜ್ಞೆ ಪ್ರದೇಶಕ್ಕೆ ಸಂಸದರು ಹೋಗದೇ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ ಸೆಕ್ಷನ್ ಕಣ್ತಪ್ಪಿನಿಂದ ಹಾಕಲಾಗಿದೆ ಎನ್ನುವುದಕ್ಕೆ ಸಮಜಾಯಿಷಿ ಕೊಡುವುದಕ್ಕೆ ಸಾಧ್ಯವಿಲ್ಲ. ಗಡಿಬಿಡಿಯಲ್ಲಿ ಎಫ್‍ಐಆರ್ ಹಾಕಿದ್ದೇವೆ ಎಂದು ಹೇಳಿದರೂ ಕೂಡ ಪೊಲೀಸರು ಗಡಿಬಿಡಿ ಆಗುವಂತಹ ಒತ್ತಡ ಹೇರಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಈಗ ಹುಟ್ಟಿಕೊಂಡಿದೆ.

Leave a Response