ನಾವಾಗಿಯೇ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಬಿಜೆಪಿಗೆ ಕರೆಯಲು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಸುಮಲತಾ ಅವರು ಅವರಾಗಿಯೇ ಬಂದರೆ ಸ್ವಾಗತಿಸಿತ್ತೇವೆ ಎಂದರು. ನಾನು ಹೇಳಿದ್ದೆಲ್ಲಾ ನಿಜವಾಗಿದೆ. 40 ವರ್ಷದ ರಾಜಕೀಯ ಅನುಭವದ ಆಧಾರದ ಮೇಲೆ ಹೇಳಿದ್ದೆ ಎಂದರು.
ಮೇ 29ರಂದು ಸಂಸದರೋದಿಗೆ ದೆಹಲಿಗೆ ತೆರಳಲಿದ್ದೇವೆ. ವರಿಷ್ಠರ ಸೂಚನೆಯಂತೆ ತೀರ್ಮಾನ ಕೈಗೊಳ್ಳಲಿದ್ದೇವೆ. ಈಗಿನ ಮೈತ್ರಿ ಸರ್ಕಾರದ ಬಗ್ಗೆ ಏನನ್ನೂ ಹೇಳಲು ಹೋಗುವುದಿಲ್ಲ ಎಂದರು. ಜನರ ತೀರ್ಮಾನದಂತೆ ನಾವು ನಡೆಡುಕೊಳ್ಳುವುದೇ ನಮ್ಮ ತೀರ್ಮಾನ ಎಂದರು.