Monday, January 20, 2025
ಸಿನಿಮಾಸುದ್ದಿ

ಕೋಸ್ಟಲ್‍ವುಡ್‍ಗೆ ವೈರಲ್ ಸ್ಟಾರ್ ವಾಸಣ್ಣ ಎಂಟ್ರಿ!! – ಕಹಳೆ ನ್ಯೂಸ್

ಅಪ್ಪಟ್ಟ ಮೋದಿ ಅಭಿಮಾನಿಯಾಗಿರುವ, ಸಾಮಾಜಿಕ ಜಲತಾಣಗಳಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ-ಹಾಸ್ಯ ಸಂಭಾಷಣೆ, ಬಾಡಿ ಲಾಂಗ್ವೇಜ್‍ನಿಂದ ಕೂಡಿರುವ ವಿಡಿಯೋಗಳಿಂದ ಸಿಕ್ಕಾಪಟ್ಟೆ ಪ್ರಚಾರಕ್ಕೊಳಗಾಗಿದ್ದ ಮಲ್ಪೆ ಮೂಲದ ವಾಸಣ್ಣ ಇದೀಗ ತುಳು ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ.

ವೈರಲ್ ಸ್ಟಾರ್ ವಾಸಣ್ಣನ ವೀಡೀಯೋ ನೋಡಿದವರ್ಯಾರು ನಗದೇ ಇರಲ್ಲ. ಅಂತಹದ್ದರಲ್ಲಿ ಹಾಸ್ಯವನ್ನೇ ಪ್ರಮುಖ ಅಸ್ತ್ರವನ್ನಾಗಿಸಿರುವ ತುಳು ಚಿತ್ರರಂಗದಲ್ಲಿ ವಾಸಣ್ಣ ಖಂಡಿತ ಯಶಸ್ಸನ್ನು ಗಳಿಸಲಿದ್ದಾರೆ ಎಂಬುವುದು ವಾಸಣ್ಣ ಅಭಿಮಾನಿಗಳ ನಂಬಿಕೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮಲ್ಪೆ ವಾಸು ತುಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿರುವುದು, ಕೋಸ್ಟಲ್‍ವುಡ್‍ನ ಬಹು ಬೇಡಿಕೆಯ ನಟ ಡೇರಿಂಗ್ ಸ್ಟಾರ್ ಪೃಥ್ವಿ ಅಂಬರ್ ನಿನ್ನೆ ಹಾಕಿರುವ ಫೇಸ್‍ಬುಕ್ ಪೋಸ್ಟ್ ಮೂಲಕ. ಹಾಗಾಗಿ ವಾಸಣ್ಣ ಪೃಥ್ವಿ ಅಂಬರ್ ಜೊತೆ ನಟಿಸುತ್ತಿರುವುದು ಖಚಿತಗೊಂಡಿದೆ. ಆದರೆ ಯಾವ ಚಿತ್ರದ ಮೂಲಕ ಎಂಬ ಸುಳಿವನ್ನು ಪೃಥ್ವಿ ಬಿಟ್ಟುಕೊಟ್ಟಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಆಗಿದ್ದ ವಾಸಣ್ಣ, ಸಿನಿ ರಂಗದಲ್ಲೂ ಸ್ಟಾರ್ ಆಗಿ ಮಿಂಚಲಿ ಎಂಬುದು ನಮ್ಮ ಹಾರೈಕೆ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್