Monday, January 20, 2025
ರಾಜಕೀಯ

ಬಿಜೆಪಿಯ ಪ್ರಚಂಡ ಗೆಲುವು ನೋಡಿದರೆ ಮೋದಿ ಅಲೆ ಮುಂದುವರೆಯುದು ಸಾಬೀತು-ಎಸ್.ಎಂ.ಕೃಷ್ಣ – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ಅಭೂತಪೂರ್ವ ಗೆಲುವು ಹಿನ್ನೆಲೆ ಪ್ರಧಾನಿ ಮೋದಿಯನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ ಕೃಷ್ಣ ಹೊಗಳಿ ಕೊಂಡಾಡಿದ್ದಾರೆ. ಈ ಕುರಿತಂತೆ ಎಸ್.ಎಂ ಕೃಷ್ಣ, ‘ಬಿಜೆಪಿಯ ಪ್ರಚಂಡ ಗೆಲುವನ್ನು ನೋಡಿದರೆ ಮೋದಿ ಅಲೆ ಮುಂದುವರೆದಿರುವುದನ್ನು ಸಾಬೀತುಪಡಿಸಿದೆ. ಅದರಲ್ಲೂ ರಾಜ್ಯದಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿರುವುದು ಸಂತಸದ ವಿಷಯವಾಗಿದೆ. ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಮರ್ಥ ನಾಯಕತ್ವ ಸಿಕ್ಕಂತಾಗಿದೆ. ಮತ್ತೆ 5 ವರ್ಷದ ಆಡಳಿತಕ್ಕೆ ಜನಾದೇಶ ನೀಡಿರುವುದು ಖುಷಿಯಾಗಿದೆ. ಮೋದಿ ಆಡಳಿತದಲ್ಲಿ ಭವಿಷ್ಯದ ಭಾರತ ಮತ್ತಷ್ಟು ಪ್ರಜ್ವಲಿಸಲಿದೆ. ಪ್ರಧಾನಿ ಮೋದಿ ತೆಗೆದುಕೊಂಡ ದೃಢವಾದ ನಿರ್ಧಾರ, ಭ್ರಷ್ಟಾಚಾರ ಮುಕ್ತ ಆಡಳಿತ ಗೆಲುವಿಗೆ ಕಾರಣವಾಗಿದೆ. ಕಾಂಗ್ರೆಸ್‍ನ ಕುಟುಂಬ ರಾಜಕಾರಣಕ್ಕೆ ದೇಶದ ಜನರಿಂದ ವಿರೋಧ ವ್ಯಕ್ತವಾಗಿದೆ’ ಅಂತಾ ಪತ್ರಿಕಾ ಪ್ರಕಟಣೆಯಲ್ಲಿ ಎಸ್.ಎಂ ಕೃಷ್ಣ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು