Monday, January 20, 2025
ರಾಜಕೀಯಸುದ್ದಿ

ಆಯ್ಕೆಯಾದ ಒಂದೇ ದಿನಕ್ಕೆ ರಾಜಿನಾಮೆ ಕೊಡಲು ನಿರ್ಧಾರ-ಪ್ರಜ್ವಲ್ ರೇವಣ್ಣ – ಕಹಳೆ ನ್ಯೂಸ್

ಹಾಸನ: ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿರುವ ಪ್ರಜ್ವಲ್ ರೇವಣ್ಣ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಇಂದು ಹಾಸನದಲ್ಲಿ ಮಾತನಾಡಿದ ಅವರು, ದೇವೇಗೌಡರು ಸೋತಿರುವುದಕ್ಕೆ ನನಗೆ ನೋವಾಗಿದೆ. ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ.

ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡುತ್ತೇನೆ. ನಾನು ಪ್ರೀತಿಯಿಂದ ಹೇಳ್ತಿದ್ದೀನಿ, ಅವರು ಇದನ್ನು ಸ್ವೀಕರಿಸಬೇಕು ಎಂದು ಹೇಳಿದರು. ನಾನು ರಾತ್ರಿಯಿಡೀ ಚಿಂತಿಸಿ ನಿರ್ಧಾರಕ್ಕೆ ಬಂದಿದ್ದೀನಿ. ಹಾಸನದ ಜನರು ತಪ್ಪು ತಿಳಿಯಬಾರದು. ಇದು ನನ್ನ ಅಭಿಪ್ರಾಯವಲ್ಲ, ನನ್ನ ನಿರ್ಧಾರ. ಮತ್ತೆ ದೇವೇಗೌಡರಿಗೆ ಶಕ್ತಿ ತುಂಬುವುದು ನನ್ನ ಉದ್ದೇಶ ಎಂದು ಪ್ರಜ್ವಲ್ ಹೇಳಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇವೇಗೌಡರು, ಬಿಜೆಪಿಯ ಜಿಎಸ್ ಬಸವರಾಜು ಎದುರು ಸೋಲನುಭವಿಸಿದ್ದಾರೆ. ಈ ಹಿನ್ನೆಲೆ ತಮ್ಮ ಕ್ಷೇತ್ರವನ್ನು ತಾತನಿಗೆ ಬಿಟ್ಟುಕೊಡಲು ಪ್ರಜ್ವಲ್ ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು