Monday, January 20, 2025
ಸಿನಿಮಾಸುದ್ದಿ

‘ಬ್ರಹ್ಮಚಾರಿ’ಯಾಗಲು ಹೊರಟ ಅಭಿನಯ ಚತುರ – ಕಹಳೆ ನ್ಯೂಸ್

ಅಭಿನಯ ಚತುರ ಬಿರುದಾಂಕಿತ ಸತೀಶ್ ನೀನಾಸಂ ‘ಅಯೋಗ್ಯ’ ಚಿತ್ರದ ದೊಡ್ಡ ಬ್ರೇಕ್ ಬಳಿಕ ಸಧಬಿರುಚಿ ಕಥೆಗಳನ್ನೇ ಆಯ್ಕೆ ಮಾಡಲು ಶುರು ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಕೆ ರವಿ ಸಾವಿನ ಕುರಿತಾಗಿ ಮೂಡಿ ಬಂದಿದ್ದ ‘ಚಂಬಲ್’ ಸೂಪರ್ ಹಿಟ್ ಎನಿಸದಿದ್ದರೂ ಉತ್ತಮ ಕನ್ನಡ ಚಿತ್ರಗಳ ಪಟ್ಟಿಗೆ ಸೇರಿಕೊಂಡಿತು. ಅದಾದ ಮೇಲೆ ತನ್ನದೇ ನಿರ್ದೇಶನದಲ್ಲಿ ‘ಮೈ ನೇಮ್ ಈಸ್ ಸಿದ್ದೇ ಗೌಡ’ ಎಂಬ ಚಿತ್ರವನ್ನು ಲಾಂಚ್ ಮಾಡಲಾಯಿತು. ಆದ್ರೆ ಅದಕ್ಕೂ ಮೊದಲು ಉದಯ್ ಕೆ ಮೆಹ್ತಾ ನಿರ್ಮಾಣದ ಹೊಸ ಚಿತ್ರ ‘ಬ್ರಹ್ಮಚಾರಿ’ಗೆ ಸಹಿ ಹಾಕಿ, ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ನೋಡಲು ಆಕರ್ಷಕವಾಗಿದೆ ಜೊತೆಗೆ ಕ್ವಾಲಿಟಿಯಲ್ಲೂ ಉತ್ಕೃಷ್ಟವಾಗಿ ಮೂಡಿ ಬಂದಿದೆ. ಇಲ್ಲಿ ಬ್ರಹ್ಮಚಾರಿಯ ಹಿಂದೆ ಬೀಳುವ ಪಾತ್ರದಲ್ಲಿ ಸ್ಯಾಂಡಲ್‍ವುಡ್‍ನ ಬೇಡಿಕೆಯ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸುತ್ತಿದ್ದು, ಧರ್ಮ ವಿಶ್ ಅವರ ಸಂಗೀತ ಚಿತ್ರಕ್ಕಿದೆ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್