Recent Posts

Sunday, January 19, 2025
ಸುದ್ದಿ

ಹೊನ್ನಾವರದ ಬಳಿಕ ಶಿವಮೊಗ್ಗದಲ್ಲಿ ಭಯೋತ್ಪದಕರ ಅಟ್ಟಹಾಸ ಹಿಂದೂ ವಿದ್ಯಾರ್ಥಿಗೆ ಚೂರಿ ಇರಿತ | ರಾಜ್ಯ ಸರಕಾರ ಸಂಪೂರ್ಣ ವಿಫಲ

 

ಶಿವಮೊಗ್ಗ : ಶಬರೀಶ ಎಂಬ ವಿದ್ಯಾರ್ಥಿ ಮೇಲೆ 4 ಜನ ಮತಾಂದ ಯುವಕರ ಗುಂಪು ಒಂದು ಮುಗಿಬಿದ್ದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಗಾಯಗೊಂಡ ಯುವಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಶಬರೀಶ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಕುಲಕ್ಷ ಕಾರಣಕ್ಕೆ ನಡೆದ ಗಲಾಟೆಯನ್ನು ಪೊಲೀಸರು ಬಗೆಹರಿಸಿದ ನಂತರದ ಬೆಳವಣಿಗೆಯಲ್ಲಿ ಶಬರೀಶ್ ಮತ್ತು ಅವನ ಗೆಳಯರಿಬ್ಬರು ಗಾಂಧಿ ಪಾರ್ಕ್ ಬಳಿ ಕುಳಿತಿದ್ದ ಸಂದರ್ಭ ಮತಾಂದ ಯುವಕರ ಗುಂಪು ಶಬರೀಶ್ ಹತ್ತಿರ ಬಂದು ಯಾವ ಕಾಲೇಜ್ ಅಂತ ವಿಚಾರಿಸಿದ್ದಾರೆ ಇವರಿಗೆ ಪ್ರತಿಕ್ರಿಯಿಸಿದ ಶಬರೀಶ್ ಅಕ್ಷರಾ ಕಾಲೇಜು ಅಂತ ಪ್ರತಿಕ್ರಿಯಿಸಿದ್ದಾನೆ ಈ ಸಂಧರ್ಭ ಮತಾಂದ ಯುವಕರು ಏಕಾ ಏಕಿ ಶಬರೀಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡುತ್ತಾರೆ .ಘಟನೆ ಸಂಬಂಧ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಈ ವರೆಗೆ ಯಾವುದೇ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಸಂಬಂಧ ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ನಾಳೆ ಬೆಳ್ಳಿಗ್ಗೆ ವರೆಗೆ ಆರೋಪಿಗಳನ್ನು ಬಂದಿಸದೆ ಹೋದರೆ ಶಿವಮೊಗ್ಗ ಬಂದ್ಗೆ ಕರೆ ನೀಡಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ .
ಇತ್ತೀಚೆಗಷ್ಟೇ ಹೊನ್ನಾವರದಲ್ಲಿ ಪರೇಶ್ ಮೇಸ್ತ ಹತ್ಯೆ ನಡೆದು ಇಡೀ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು.ಇದಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ ,ಘನ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಆಡಳಿತ ವೈಫಲ್ಯ ದಿಂದ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ,ಸಿದ್ದರಾಮಯ್ಯನವರೇ ಎತ್ತ ಸಾಗುತಿದೆ ಕರ್ನಾಟಕ ಉತ್ತರಿಸಿ ?

Leave a Response