Tuesday, January 21, 2025
ರಾಜಕೀಯಸುದ್ದಿ

ಮನೆಯಲ್ಲಿರೋರು 9 ಮಂದಿ, ಕೇವಲ 5 ವೋಟ್​ ಬಂದಿದೆ ಎಂದು ಅಭ್ಯರ್ಥಿ ಕಣ್ಣೀರು..! – ಕಹಳೆ ನ್ಯೂಸ್

ಜಲಂಧರ್: ನಿನ್ನೆ ಹೊರಬಿದ್ದ ಸಾರ್ವತ್ರಿಕ ಚುನಾವಣೆಯ ಫಲಿತಾಂಶದಲ್ಲಿ ಒಂದೆಡೆ ಘಟಾನುಘಟಿ ನಾಯಕರು ಮಂಡಿಯೂರಿದ್ರೆ, ಇನ್ನೂ ಹಲವಾರು ನಾಯಕರು ಲಕ್ಷ ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಆದ್ರೆ ಪಂಜಾಬ್​​ನ ಅಭ್ಯರ್ಥಿಯೊಬ್ಬರು ತನಗೆ ಕೇವಲ 5 ವೋಟ್​ಗಳನ್ನ ಬಂದಿದೆ ಎಂದು ಶಾಕ್​​​ಗೆ ಒಳಗಾಗಿದ್ದರು.

ಜಲಂಧರ್​​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀತು ಶುತ್ತೇರ್ನ್​​ವಾಲಾ, ನಿನ್ನೆ ಮೊದಲ ಸುತ್ತಿನ ಕೌಂಟಿಂಗ್​​​ ವೇಳೆ ಕೇವಲ 5 ವೋಟ್​ಗಳು ಬಂದಿರೋದು ನೋಡಿ ಶಾಕ್ ಆಗಿದ್ರು. ಕುಟುಂಬದಲ್ಲಿ 9 ಸದಸ್ಯರಿದ್ದರೂ ಕೂಡ ನನಗೆ ಬಂದಿರೋ ವೋಟ್​ ಕೇವಲ 5 ಎಂದು ಮಾಧ್ಯಮವೊಂದರ ಮುಂದೆ ಅಳಲು ತೋಡಿಕೊಂಡ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜಾಬ್​​ನ ಜಗ್​​ಬಾನಿ ಅನ್ನೋ ಮಾಧ್ಯಮವೊಂದು ನೀತು ಅವರ ಸಂದರ್ಶನ ಮಾಡಿತು. ಈ ವೇಳೆ ಕ್ಯಾಮೆರಾ ಮುಂದೆಯೇ ಅಳಲು ಶುರು ಮಾಡಿದ ನೀತು, ನನಗೆ ಕೇವಲ 5 ಮತಗಳು ಬಂದಿವೆ, ನನ್ನ ಕುಟುಂಬಸ್ಥರೇ ನನಗೆ ದ್ರೋಹ ಮಾಡಿದ್ದಾರೆ ಅಂತ ದುಃಖಿಸಿದ್ರು. ಕುಟುಂಬಸ್ಥರನ್ನ ದೂಷಿಸುವುದರ ಜೊತೆಗೆ ನೀತು ಇವಿಎಂ ಮಷೀನ್​ಗಳ ಟ್ಯಾಂಪರಿಂಗ್ ಆಗಿದೆ ಅಂತ ಕೂಡ ಆರೋಪ ಮಾಡಿದ್ರು. ಈ ವೇಳೆ ವರದಿಗಾರ, ನಿಮ್ಮ ಕುಟುಂಬಸ್ಥರೇ ನಿಮಗೆ ಸಪೋರ್ಟ್​ ಮಾಡದಿರುವಾಗ, ಬೇರೆಯವರು ನಿಮಗೆ ವೋಟ್​ ಹಾಕ್ತಾರೆ ಅಂತ ಹೇಗೆ ನಿರೀಕ್ಷಿಸುತ್ತೀರಿ ಅಂತ ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ನಿರೀಕ್ಷೆಯಂತೆಯೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವ್ಯಕ್ತಿಗೆ ಮನೆಯವರೇ ವೋಟ್​ ಹಾಕಲಿಲ್ವಲ್ಲ ಅಂತ ಜನ ಕಮೆಂಟ್​ ಮಾಡ್ತಿದ್ದಾರೆ. ಆದ್ರೆ ಮುಂದಿನ ಸುತ್ತಿನ ಮತ ಎಣಿಕೆ ವೇಳೆ ನೀತು ಅವರ ವೋಟ್​ ಕೌಂಟ್​ ಜಾಸ್ತಿಯಾಗಿದೆ. ಒಟ್ಟಾರೆ ಅವರು 856 ವೋಟ್​ಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.