ಮಂಗಳೂರು : ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಮೋದಿ ಅಲೆ ಕೆಲಸ ಮಾಡಿದೆ ಅನ್ನೋದು ಇಲ್ಲಿ ಸ್ಫಷ್ಟ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಫೈಟ್ ನೀಡಲು ಮುಂದಾಗಿತ್ತು. ಆದರೆ, ಮೋದಿ ಹವಾದ ಮುಂದೆ ಕಾಂಗ್ರೆಸ್‍ನ ಯಾವ ಪ್ಲಾನ್ ಕೂಡ ಕೆಲಸ ಮಾಡಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸೋಲಿಗೆ ಕಾರಣ :
• ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಎಷ್ಟಾದರೂ ಹೊಸ ಮುಖ.
• ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿದ್ದರೂ, ಮಂಗಳೂರು ನಗರಕ್ಕಷ್ಟೇ ಸೀಮಿತವಾಗಿದ್ದ ಯುವ ಮುಖಂಡ. ಬೇರಾವ ಕಡೆಗಳಲ್ಲಿಯೂ ಅಷ್ಟಾಗಿ ತನ್ನ ಹಿಡಿತವಿರಲಿಲ್ಲ.
• ಇವೆಲ್ಲವನ್ನ ಮೊದಲೆ ಕಾಂಗ್ರೆಸ್ ನ ಹಿರಿ ತಲೆಗಳು ತಿಳಿದುಕೊಳ್ಳಬೇಕಾಗಿತ್ತು. ತಿಳಿದಿದ್ದರೂ ಪಕ್ಷದ ಗೆಲುವಿಗಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕಸರತ್ತು ಮಾಡಲಿಲ್ಲ.
• ಪ್ರಮುಖ ನಾಯಕರು ಪ್ರಚಾರಕ್ಕೇ ಹೋಗದೆ, ಅಭ್ಯರ್ಥಿಯನ್ನು ಹರಕೆಯ ಕುರಿಯಾಗಿಸಿದ್ದರು.
ಸ್ವ-ಪಕ್ಷದಲ್ಲೇ ತಲೆದೂರಿದ ಅಸಮಾಧಾನದ ಕಿಚ್ಚು :
• ಬಿಲ್ಲವ ಸಮುದಾಯದ ಅತಿ ಹೆಚ್ಚು ಮತಗಳಿದ್ದರೂ ಬಿಲ್ಲವ ನಾಯಕರಾದ ವಿನಯ ಕುಮಾರ್ ಸೊರಕೆ ತನಗೆ ಸೀಟು ಸಿಗದ ಸಿಟ್ಟಲ್ಲಿ ಪ್ರಚಾರದಿಂದ ದೂರ ಉಳಿದಿದ್ದರು.
• ರಮಾನಾಥ ರೈ, ಐವನ್ ಡಿಸೋಜ, ಯು.ಟಿ.ಖಾದರ್ ತೋರಿಕೆಗಷ್ಟೇ ಪ್ರಚಾರದ ಕಣದಲ್ಲಿದ್ದರು ಎಂದು ಆರೋಪಿಸಲಾಗಿದೆ.
• ಪಕ್ಷದೊಳಗಿನ ಭಿನ್ನಾಭಿಪ್ರಾಯದ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ತಾನು ಸಚಿವ ಡಿ.ಕೆ. ಶಿವಕುಮಾರ್ ಆಪ್ತನೆಂದು ಬಿಂಬಿಸಿಕೊಂಡಿದ್ದೇ ಪಕ್ಷದಲ್ಲಿ ಮುಳುವಾಯ್ತು ಎನ್ನಲಾಗುತ್ತಿದೆ.
• ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ನಾಯಕರಿಗೆ ಮಿಥುನ್ ರೈ ಗೆಲ್ಲುವುದಿರಲಿ, ಬಿಜೆಪಿ ಅಭ್ಯರ್ಥಿಗೆ ನಿಕಟ ಸ್ಪರ್ಧೆ ಕೊಡುವುದೇ ಇಷ್ಟವಿರಲಿಲ್ಲ.
• ಭವಿಷ್ಯದಲ್ಲಿ ಮಿಥುನ್ ರೈ ನಾಯಕನಾಗುತ್ತಾನೆಂಬ ಕಾರಣಕ್ಕೆ ಜಿಲ್ಲಾ ನಾಯಕರು ವ್ಯವಸ್ಥಿತ ಪ್ರಚಾರಕ್ಕೆ ಮನಸ್ಸು ಮಾಡಿರಲಿಲ್ಲ. ಅದಕ್ಕಾಗಿಯೇ ಜಿಲ್ಲಾ ಕಾಂಗ್ರೆಸ್, ಪ್ರಚಾರದ ಕಣಕ್ಕೆ ರಾಜ್ಯ ನಾಯಕರನ್ನಾಗಲೀ, ಕೇಂದ್ರ ನಾಯಕರನ್ನೂ ಜಿಲ್ಲೆಗೆ ತಂದಿರಲಿಲ್ಲ.
• ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಹವಾ ಎಷ್ಟು ಕಾರಣವೋ, ಕಾಂಗ್ರೆಸ್ ನಾಯಕರ ಪಿತೂರಿಯೂ ಕಾರಣವಾಗಿತ್ತು.
ಕಳೆದ ಬಾರಿಯೂ 1.43 ಲಕ್ಷ ಮತಗಳ ಅಂತರ 2014ರ ಚುನಾವಣೆಯಲ್ಲಿ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗಲೂ ಕಾಂಗ್ರೆಸಿನ ಬಣ ರಾಜಕೀಯವೇ ಸೇರಿ ಪೂಜಾರಿಯನ್ನು ಸೋಲಿಸಿದ್ದರು ಎಂದು ಹೇಳಲಾಗಿತ್ತು.. ಹಾಗಾಗಿ ಕಳೆದ ಬಾರಿ 1.43 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಸೋಲು ಕಂಡಿತ್ತು. ಈ ಬಾರಿಯೂ ಜನಾರ್ದನ ಪೂಜಾರಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಇಲ್ಲಿ ಮೋದಿ ಅಲೆಯಿಂದಾಗಿ ಕಾಂಗ್ರೆಸ್ ಪರಿಸ್ಥಿತಿ ಚೆನ್ನಾಗಿಲ್ಲ, ಆದರೆ ನಮ್ಮ ಕಾಂಗ್ರೆಸ್ ನ ಮಿಥುನ್ ರೈ ಉತ್ತಮ ಅಭ್ಯರ್ಥಿ ಎಂದು ಪ್ರಶಂಸಿ ಸಿದ್ದರು.
ಕಾಂಗ್ರೆಸ್ ನಾಯಕರ ಹೊಣೆಗಾರಿಕೆ ಮಿಥುನ್ ರೈ ಪರ ಕ್ಷೇತ್ರದಲ್ಲಿ ಯುವಕರ ಒಲವು ಹೆಚ್ಚಿದೆ ಎಂಬ ಅಂಶವು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜಯದ ದಡ ಸೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿತ್ತು. ಆದರೆ ಆ ಲೆಕ್ಕಾಚಾರವು ಇಲ್ಲಿ ತಲೆಕೆಳಗಾಗಿದೆ. ಈ ಬಾರಿ ಮೋದಿ ಹವಾ ಮತ್ತು ಎಸ್‍ಡಿಪಿಐ ಸ್ಪರ್ಧೆಯಿಂದಾಗಿ ಬಿಜೆಪಿ ಗೆಲುವಿನ ಅಂತರ 2.73 ಲಕ್ಷಕ್ಕೇರರಿದೆ. ಇಂಥ ಸೋಲಿಗೆ ಒಂದೆಡೆ ಮೋದಿ ಹವಾಗಿಂತಲೂ ಜಿಲ್ಲಾ ಕಾಂಗ್ರೆಸ್ ನಾಯಕರೇ ಹೊಣೆಯೇ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ.