ಮಲಯಾಳಂನ ಸ್ಟಾರ್ ನಟ, ಮೆಗಾ ಸ್ಟಾರ್ ಪುತ್ರ ದುಲ್ಕರ್ ಸಲ್ಮಾನ್ ಬಾಲಿವುಡ್‍ನಲ್ಲಿ ‘ಕ್ಯಾರವಾನ್’ ಏರಿ ಇಳಿದಿದ್ದರು. ಇದೀಗ ಮತ್ತೆ ಬಾಲಿವುಡ್‍ಗೆ ಕಾಲಿಟ್ಟಿರುವ ದುಲ್ಕರ್ ಕ್ರಿಕೆಟ್ ಹಿನ್ನಲೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅಲ್ಲದೆ ಇಲ್ಲಿ ದುಲ್ಕರ್ ಗೆ ಜೋಡಿಯಾಗಿ ಸೋನಮ್ ಕಪೂರ್ ನಟಿಸುತ್ತಿರುವುದು ವಿಶೇಷ. ಚಿತ್ರಕ್ಕೆ ‘ದಿ ಝೋಯಾ ಫ್ಯಾಕ್ಟರ್’ ಎಂದು ಹೆಸರಿಡಲಾಗಿದೆ. ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಈ ಚಿತ್ರವು ಕ್ರಿಕೆಟ್ ಹಿನ್ನಲೆಯುಳ್ಳದಾಗಿದ್ದು ಎಂಬುದನ್ನು ಸಾಬೀತು ಪಡಿಸಲು 2 ಬ್ಯಾಟ್ ಹಾಗು ಒಂದು ಬಾಲ್‍ನ ಚಿತ್ರವನ್ನು ನಿಂಬೆಹಣ್ಣು ಮತ್ತು 2 ಮೆಣಸಿನಕಾಯಿಯನ್ನು ಆಯುಧ ಪೂಜೆಗೆ ಕಟ್ಟಿ ನೇತು ಹಾಕಿದ ರೀತಿಯಲ್ಲಿ ಅತ್ಯಂತ ಸೃಜನಾತ್ಮಕವಾಗಿ ಪೋಸ್ಟರ್ ಡಿಸೈನ್ ಮಾಡಿದೆ ಚಿತ್ರತಂಡ. ಜೊತೆಗೆ ದುಲ್ಕರ್ ಜೊತೆ ಸೋನಮ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿಂತಿರುವುದು, ಕ್ರಿಕೆಟ್ ಜೊತೆಗೆ ಇವರಿಬ್ಬರ ಪ್ರೇಮ ಕಥೆ ಸಾಗಲಿದೆ ಎಂಬವುದು ನಮಗೆ ಸ್ಪಷ್ಟವಾಗುತ್ತದೆ.
‘ದಿ ಝೋಯಾ ಫ್ಯಾಕ್ಟರ್’ ಸಿನೆಮಾವನ್ನು ನಿರ್ದೇಶನ ಮಾಡುತ್ತಿರುವುದು ‘ಪರಮಾಣು’ ಖ್ಯಾತಿಯ ಅಭಿಷೇಕ್ ಶರ್ಮಾ ಅವರು. ಒಟ್ಟಿನಲ್ಲಿ ವಿಶ್ವಕಪ್ ಸನಿಹದಲ್ಲಿ ಕ್ರಿಕೆಟ್ ಬಗೆಗೆನ ಚಿತ್ರಗಳು ಬರುತ್ತಿರುವುದು ಸಂತಸದ ಸಂಗತಿ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್