Monday, January 20, 2025
ರಾಜಕೀಯಸುದ್ದಿ

ಮೋದಿಯಂತ ನಾಯಕನನ್ನು ಪಡೆಯಲು ಭಾರತೀಯರು ಪುಣ್ಯ ಮಾಡಿದ್ದಾರೆ : ಡೊನಾಲ್ಡ್ ಟ್ರಂಪ್ – ಕಹಳೆ ನ್ಯೂಸ್

‘ಈಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅವರ ಮಹಾನ್ ವಿಜಯಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಅವರು ಭಾರತೀಯರಿಗೆ ಮಹಾನ್ ವ್ಯಕ್ತಿ ಮತ್ತು ಮುಖಂಡ. ಅಂಥ ನಾಯಕರನ್ನು ಪಡೆಯಲು ಭಾರತೀಯರು ಅದೃಷ್ಟ ಮಾಡಿದ್ದರು’ ಎಂದು ಲೋಕಸಭೆ ಚುನಾವಣೆಯಲ್ಲಿ ಎನ್‍ಡಿಎ ಭರ್ಜರಿ ವಿಜಯ ಸಾಧಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ, ಹಾಡಿಹೊಗಳಿದ್ದಾರೆ.

ವಿಶ್ವದ ನಾನಾ ದೇಶದ ನಾಯಕರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ಮುಂಬರುವ ದೇಶದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳೊಂದಿಗೆ ಭಾರತ ಸೌಹಾರ್ದ ಸಂಬಂಧ ನಿಭಾಯಿಸಿಕೊಂಡು ಹೋಗುವ ಭರವಸೆಯನ್ನು ಈ ಎಲ್ಲಾ ನಾಯಕರೂ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು