Recent Posts

Sunday, January 19, 2025
ಸುದ್ದಿ

ಇತಿಹಾಸ ಸ್ರಷ್ಟಿಸಿತು ಅರೆಭಾಷೆ ಸಾಹಿತ್ಯ ಅಕಾಡೆಮಿ | ದಿವ್ಯಪ್ರಭಾ ಚಿಲ್ತಡ್ಕ ಶಿಫಾರಸ್ಸಿಗೆ ಮನ್ನಣೆ ; ಪ್ರಪ್ರಥಮ ಭಾರಿಗೆ ಪುತ್ತೂರಿಗ ಚಿದಾನಂದ ಬೈಲಾಡಿ ಆಯ್ಕೆ

 

ಪುತ್ತೂರು : ಕಳೆದ ಹಲವಾರು ವರುಷಗಳಿಂದ ಕರ್ನಾಟಕ ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅರೆ ಭಾಷೆ ಸಾಹಿತ್ಯ ಅಕಾಡೆಮಿ ಸಮೀತಿಯ ಸುತ್ತೋಲೆ ರಾಜ್ಯ ಸರಕಾರ ಹೊರಡಿಸಿತು. ಇದುವರೆಗೆ ಅರೆಭಾಷೆ ಅಕಾಡೆಮಿಯಲ್ಲಿ ದೊರೆಯದ ಸ್ಥಾನ ಮಾನ ಪುತ್ತೂರು ತಾಲೂಕಿಗೆ ಈ ಭಾರಿ ದೊರೆತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವಾರು ಸಂಘಸಂಸ್ಥೆಗಳ ಚುಕ್ಕಾಣಿಯೂ, ಬಲ್ನಾಡು ಉಲ್ಲಾಕುಳು ದೇವಸ್ತಾನದ ವ್ಯವಸ್ತಾಪನಾ ಸಮೀತಿಯ ಅಧ್ಯಕ್ಷರೂ, ಪುತ್ತೂರು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರೂ ಆದ , ಖ್ಯಾತ ನ್ಯಾಯವಾದಿಯಾಗಿರುವ ಚಿದಾನಂದ ಬೈಲಾಡಿಯವರ ಹೆಸರು ಆಯ್ಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಸಮಾಜಕ್ಕೆ ಅರ್ಪಿಸಿದ ಬೈಲಾಡಿ ಯವರಿಗೆ ಅಕಾಡೆಮಿ ಸದಸ್ಯತ್ವದ ಪಟ್ಟ ದೊರಕಲು ಪ್ರಮುಖ ಕಾರಣಕರರ್ತರಾದ ಒಕ್ಕಲಿಗ ಸಮುದಾಯದ ಕಣ್ಮಣಿ, ಒಕ್ಕಲಿಗ ಸಮುದಾಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿ ಶಹಬ್ಬಾಸ್ ಗಿರಿ ಗಿಟ್ಟಿಸಿಕ್ಕೊಂಡ ಕರ್ನಾಟಕ ರಾಜ್ಯಾದ್ಯಂತ ತನ್ನ ಹೆಸರನ್ನು ಅಚ್ಚಳಿಯದೆ ನೆಲೆಯೂರಿಸಿದ ಮಹಿಳಾ ಮತ್ತು ಸಮಾಜ ಕಲ್ಯಾಣ ಮಂಡಳಿ ಇಲಾಖೆಯ ಮಾಜಿ ಅಧ್ಯಕ್ಷೆಯೂ, ಪುತ್ತೂರನ್ನು ಹತ್ತೂರಿಗೆ ಪರಿಚಯಿಸಿದ ಧೀರ ಮಹಿಳೆ ದಿವ್ಯ ಪ್ರಭಾ ಚಿಲ್ತಡ್ಕರವರ ಪರಿಶ್ರಮ, ಮತ್ತು ಶಿಫಾರಸ್ಸೇ ಕಾರಣ ಎನ್ನಲಾಗುತ್ತಿದೆ.

ಉಸ್ತುವಾರಿ ಸಚಿವರಾದ ರಮನಾಥ ರೈಯವರ ಶಿಫಾರಸ್ಸು ಮತ್ತು ದಿವ್ಯ ಪ್ರಭಾ ಚಿಲ್ತಡ್ಕರವರ ಶತ ಪ್ರಯತ್ನದಿಂದ ಪುತ್ತೂರು ತಾಲೂಕಿಗೆ ಅರೆ ಬಾಷೆ ಅಕಾಡೆಮಿ ಸದಸ್ಯತ್ವ ದೊರಕುವಂತಯಾಯಿತು ಎಂಬುದು ಒಕ್ಕಲಿಗ ಸಮುದಾಯದ ಪ್ರಮುಖರ ಮಾತುಗಳು. ಓಟ್ಟಾರೆ ಹೇಳಬೇಕಾದರೆ ತಾಲ್ಲೂಕಿನ ಒಕ್ಕಲಿಗ ಸಮುದಾಯಕ್ಕೆ ಸಂದ ಗೌರವ ಇದಾಗಿದೆ.

Leave a Response