Recent Posts

Monday, January 20, 2025
ಸುದ್ದಿ

ಲಾರಿ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಹೃದಯಘಾತ – ಕಹಳೆ ನ್ಯೂಸ್

ಬಂಟ್ವಾಳ: ಲಾರಿ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನೋರ್ವ ಹೃದಯಘಾತದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ. ಅಲ್ ಮದೀನ ಲಾರಿ ಚಾಲಕ ವೇಣೂರು ನಿವಾಸಿ ಲತೀಫ್ ಎಂಬವರು ಹೃದಯಘಾತದಿಂದ ಮೃತಪಟ್ಟವರು. ಮುಲಾರಪಟ್ನ ಪಲ್ಗುಣಿ ನದಿಯಿಂದ ಟಿಪ್ಪರ್ ಲಾರಿಯಲ್ಲಿ ಮರಳು ತುಂಬಿಸಿಕೊಂಡು ಹೋಗುತ್ತಿದ್ದ ವೇಳೆ ಸಿದ್ದಕಟ್ಟೆ ಎಂಬಲ್ಲಿ ಲಾರಿ ಚಾಲನೆಯಲ್ಲಿರುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತು.ಕೂಡಲೇ ಸ್ಥಳೀಯರು ಸೇರಿಕೊಂಡು ಸಿದ್ದಕಟ್ಟೆ 108 ಅಂಬ್ಯುಲೆನ್ಸ್ ಮೂಲಕ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಲು ಹೊರಟು ಬರುವ ವೇಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಜಾಹೀರಾತು

ಜಾಹೀರಾತು
ಜಾಹೀರಾತು