Recent Posts

Sunday, January 19, 2025
ರಾಜಕೀಯಸುದ್ದಿ

ಮೊದಲಬಾರಿಗೆ ಸಂಸತ್ ಪ್ರವೇಶಕ್ಕೆ ಒಡಿಶಾದ ಮೋದಿ ಸಿದ್ಧತೆ..!! – ಕಹಳೆ ನ್ಯೂಸ್

ಹಣಬಲ, ತೋಳ್ಬಲ, ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಸಾಧ್ಯ. ಸಾಮಾನ್ಯನು ಚುನಾವಣೆಯಲ್ಲಿ ಮತ ಹಾಕಲು ಮಾತ್ರ.. ಸಾಮಾನ್ಯನಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಅಸಾಧ್ಯ ಅನ್ನೋ ಮಾತುಗಳು ದೂರವಾಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಭದ್ರ ಭಾರತದ ನಿರ್ಮಾಣದ ಕನಸನ್ನು ಹೊತ್ತ, ಶ್ರಮಿಸಲು ಸಿದ್ಧವಿರುವ ಪ್ರತಿಯೊಬ್ಬರಿಗೂ ಆ ಅವಕಾಶ ದೊರೆಯಲಿದೆ. ಅದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇದಕ್ಕೆ ಉದಾಹರಣೆ ಎಂಬಂತೆ ಒಡಿಶಾದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಪತಾಕೆ ಹಾರಿಸಿದ್ದಾರೆ. ಒಡಿಶಾದ ಬಲಸೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸರಂಗಿ ಬಿಜು ಜನತಾದಳ ಪಕ್ಷದ ಅಭ್ಯರ್ಥಿ ರಬೀಂದ್ರ ಕುಮಾರ್ ಜೈನ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಾಪ್ ಸರಂಗಿ ಒಡಿಶಾದ ಮೋದಿ ಅಂತಾ ಫೇಮಸ್. ಪ್ರತಾಪ್ ಸರಂಗಿ ಶ್ರೀಮಂತರಂತೂ ಅಲ್ಲ. ನಿಲಗಿರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ರೂ ಕೂಡಾ, ವಾಸಿಸಲು ಇವರಿಗೆ ಸ್ವಂತ ಮನೆಯೂ ಇಲ್ಲ. ಅವಿವಾಹಿತ ಪ್ರತಾಪ್ ಸರಂಗಿ, ಕಳೆದ ವರ್ಷ ತನ್ನ ತಾಯಿಯನ್ನು ಕಳೆದುಕೊಂಡಿದ್ರು. ಬರೀ ಸೈಕಲ್‍ನಲ್ಲಿ ಕ್ಷೇತ್ರದೆಲ್ಲೆಡೆ ಸುತ್ತಿ, ತಳ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದ್ರು. ಅವರ ಪರಿಶ್ರಮ ಮೆಚ್ಚಿದ ಬಿಜೆಪಿ ಈ ಬಾರಿ ಬಲಸೂರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿತ್ತು. ಪ್ರತಾಪ್ ಸರಂಗಿಯವರ ಶಿಸ್ತು, ಕೆಲಸವನ್ನು ಮೆಚ್ಚಿದ್ದ ಕಾರ್ಯಕರ್ತರು ಹಾಗೂ ಮತದಾರರು ಈ ಬಾರಿ ಗೆಲ್ಲಿಸಿ, ಸಂಸತ್‍ಗೆ ಕಳುಹಿಸಿಕೊಟ್ಟಿದ್ದಾರೆ.